ಮೈಸೂರು

ಕಡಿಮೆ ದರದಲ್ಲಿ ದಿನನಿತ್ಯದ ದಿನಸಿ ಪದಾರ್ಥ ಮನೆ ಮನೆಗೆ ತಲುಪಿಸುವ ಕಾರ್ಯಕ್ಕೆ ಚಾಲನೆ

ಮೈಸೂರು,ಮಾ.30:-  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೈಸೂರು ಲಾಕ್ ಡೌನ್ ಆಗಿದ್ದು, ಮನೆಯಿಂದ ಯಾರೂ ಹೊರ ಬರದಂತೆ ಆದೇಶ  ಹೊರಡಿಸಲಾಗಿದೆ.

ಅದಕ್ಕಾಗಿ ಕಡಿಮೆ ದರದಲ್ಲಿ ದಿನನಿತ್ಯದ ದಿನಸಿ ಪದಾರ್ಥ ಮನೆ ಮನೆಗೆ ತಲುಪಿಸೋ ಕಾರ್ಯಕ್ಕೆ ಇಂದು ಮೈಸೂರಿನ ಕೆ.ಆರ್.ಕ್ಷೇತ್ರದ ಶಾಸಕ ರಾಮದಾಸ್‌ರಿಂದ ಚಾಲನೆ ದೊರಕಿತು. ಕೆ.ಆರ್.ಕ್ಷೇತ್ರದ ಮನೆ ಮನೆಗೆ ಅಗತ್ಯ ದಿನಸಿಗಳನ್ನು ತಲುಪಿಸುವ ಕಾರ್ಯ ನಡೆದಿದ್ದು, 10ರೂಪಾಯಿಂದ ದಿನಸಿ ಪ್ರಾರಂಭಿಸಲಾಗಿದೆ. ಎಂಆರ್‌ಪಿಗಿಂತ ಕಡಿಮೆ ದರದಲ್ಲಿ ದಿನಸಿ ಪೂರೈಸೋ ಕೆಲಸ ನಡೆಯುತ್ತಿದೆ. ಮೈಸೂರು ಪಾಲಿಕೆ ಸಹಕಾರದೊಂದಿಗೆ ವಿನೂತನ ಕಾರ್ಯಕ್ರಮ ನಡೆದಿದ್ದು, ಜನರು ಅನವಶ್ಯಕವಾಗಿ ಮನೆಯಿಂದ ಹೊರ ಬರದಿರಲು ಕ್ರಮ ಕೈಗೊಳ್ಳಲಾಗಿದೆ. ಬುಧವಾರದಿಂದ ದಿನಸಿ ಜೊತೆಗೆ ತರಕಾರಿ ಕೂಡ ಮಾರಾಟ ಮಾಡಲಾಗುವುದು ಎಂದು   ಶಾಸಕ ರಾಮದಾಸ್‌ ಮಾಹಿತಿ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: