ಪ್ರಮುಖ ಸುದ್ದಿ

ಸಾಮಾಜಿಕ ಅಂತರಕ್ಕೆ ಮುಂದಾದ ಮಾದಾಪುರ ಗ್ರಾಮದ ಮುಗ್ದ ಹಳ್ಳಿಯ ಜನತೆ   ಕಾರ್ಯಕ್ಕೆ ಶ್ಲಾಘನೆ  

ರಾಜ್ಯ(ಮಂಡ್ಯ)ಮಾ.30:- ಕೊರೋನ ವೈರಸ್ ಹಿನ್ನೆಲೆಯಲ್ಲಿ ತಾಲೂಕಿನ ಜನತೆ ತಮಗೆ ತಾವೇ ನಿರ್ಬಂಧ  ಹಾಕಿಕೊಂಡು ಹೆಮ್ಮಾರಿ ಕೊರೋನ ವೈರಸ್ ವಿರುದ್ಧ ಅಂತರ ಕಾಯ್ದು ಕೊಳ್ಳುವುದಕ್ಕಾಗಿ ಬಾಕ್ಸ್ ನಿರ್ಮಿಸಿ ಅದರಲ್ಲೇ ನಿಂತು ಹಾಲು ಹಾಕುವುದಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದು ಶ್ಲಾಘನೆ ವ್ಯಕ್ತವಾಗಿದೆ.

ಮುಗ್ಧ ಹಳ್ಳಿಯ ಸಾರ್ವಜನಿಕರು   ಮುಂಜಾನೆಯ ಜನದಟ್ಟಣೆ ಇರುವ ಜಾಗವಿದ್ದರೆ ತಾವು ಸಾಕಿರುವ ಜಾನುವಾರಗಳ ಹಾಲು ಕರೆದು ತಮ್ಮ ಗ್ರಾಮಗಳ ಸಮೀಪದ ಹಾಲು ಉತ್ಪಾದಕರ ಸಂಘದ ಆವರಣದಲ್ಲಿ ಅಕ್ಕಪಕ್ಕದಲ್ಲಿ ನಿಲ್ಲುವ ಜಾಗ ವಾಗಿದ್ದು, ಹೆಮ್ಮಾರಿ ಕೊರೋನ ವೈರಸ್ ತಡೆಯುವ ನಿಟ್ಟಿನಲ್ಲಿ  ಕೆಆರ್ ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಮಾದಪುರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಆವರಣದಲ್ಲಿ ಸಾಮಾಜಿಕ ಅಂತರ ಕೈಗೊಳ್ಳುವ ಕಾರ್ಯದಲ್ಲಿ ಗ್ರಾಮದ ಮುಗ್ಧ ಹಳ್ಳಿಯ ಜನತೆ ಸಹಕರಿಸಿದ ಹಿನ್ನೆಲೆಯಲ್ಲಿ ತಾಲೂಕು ದಂಡಾಧಿಕಾರಿ  ಶಿವಮೂರ್ತಿ   ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳು ಮಾದಾಪುರ ಹಾಗೂ ಕೆಲ ಗ್ರಾಮದ ಸಾರ್ವಜನಿಕರಿಗೆ ಶ್ಲಾಘನೆ ವ್ಯಕ್ತಪಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: