ಮೈಸೂರು

ಕೊರೋನಾ ವೈರಸ್ ಹಿನ್ನೆಲೆ : ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಹೈ ಅಲರ್ಟ್

ಮೈಸೂರು,ಮಾ.30:- ಕೊರೋನಾ ವೈರಸ್ ಸೋಂಕು ಪ್ರಕರಣ ನಂಜನಗೂಡಿನಲ್ಲಿ ಹೆಚ್ಚು ಕಂಡು ಬಂದಿದ್ದು, ದಕ್ಷಿಣಕಾಶಿ ಯನ್ನು ರೆಡ್ ಜೋನ್  ಎಂದು ಘೋಷಿಸಲಾಗಿದ್ದು, ಹೈ ಅಲರ್ಟ್  ನಡೆಸಲಾಗಿದೆ.

ಒಂದೇ ದಿನದಲ್ಲಿ 5 ಕೊರೋನಾ ಪಾಸಿಟಿವ್ ಪ್ರಕರಣ ಕಂಡು ಬಂದ ಹಿನ್ನೆಲೆ ಯಲ್ಲಿ ನಂಜನಗೂಡನ್ನು ರೆಡ್ ಅಲರ್ಟ್ ನಗರ ಎಂದು ಘೋಷಿಸಲಾಗಿದೆ . ನಂಜನಗೂಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಗಳಿಗೆ ನಾಕಾಬಂದಿ ಮಾಡಿ ಬಂದ್ ಮಾಡಲಾಗಿದೆ . ಮೊನ್ನೆ ನಂಜನಗೂಡಿನ ಜ್ಯುಬಿಲಿಯೆಂಟ್ ಕಾರ್ಖಾನೆಯ  ಐದು ಮಂದಿ ನೌಕರರಿಗೆ ಮಹಾಮಾರಿ ಕೊರೋನಾ ಪಾಸಿಟಿವ್ ಪತ್ತೆ ಯಾಗಿತ್ತು . ಈ ಹಿನ್ನೆಲೆಯಲ್ಲಿ  ಜಿಲ್ಲಾ ಮತ್ತು ತಾಲೂಕು ಆಡಳಿತ ತಕ್ಷಣ ಹೈ ಅಲರ್ಟ್ ಆಗಿದ್ದು, ಮೈಸೂರು -ಊಟಿ ಕೇರಳ ಮತ್ತು ತಮಿಳುನಾಡು ಸಂಪರ್ಕ  ಕಲ್ಪಿಸುವ ಹೆದ್ದಾರಿ ಹಾಗೂ ಪಟ್ಟಣಕ್ಕೆ ನಾಲ್ಕು ಕಡೆಯಿಂದಲೂ ಸಂಪರ್ಕ  ಕಲ್ಪಿಸುವ ಎಲ್ಲ ಮುಖ್ಯ ರಸ್ತೆಗಳನ್ನು ಸಹ ಬಂದ್ ಮಾಡಲಾಗಿದೆ. ಅಗತ್ಯ ಮತ್ತು ಪಾಸ್ ಹೊಂದಿರುವ ವಾಹನಗಳನ್ನು ಹೊರತುಪಡಿಸಿ ಪಟ್ಟಣದಿಂದ ಯಾರೂ ಹೊರಹೋಗದಂತೆ ಮತ್ತು ಒಳ ಬರದಂತೆ ಪೊಲೀಸರು ನಾಕಾಬಂದಿ ಹಾಕಿದ್ದಾರೆ. ಸ್ಥಳೀಯರು ಕೂಡ ಘಟನೆಯಿಂದ ಬೆಚ್ಚಿಬಿದ್ದಿದ್ದು ಯಾರೂ ಕೂಡ ಅನಾವಶ್ಯಕವಾಗಿ ಮನೆಯಿಂದ ಹೊರ ಬರುತ್ತಿಲ್ಲ. ಅಗತ್ಯವಸ್ತುಗಳ ಮಾರಾಟ ಕೇಂದ್ರಗಳನ್ನು ಬಿಟ್ಟರೆ ಉಳಿದೆಲ್ಲವನ್ನು ಬಂದ್ ಮಾಡಲಾಗಿದ್ದು  ಇಡೀ  ನಂಜನಗೂಡು  ಪಟ್ಟಣ  ಸ್ತಬ್ಧವಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: