ಪ್ರಮುಖ ಸುದ್ದಿವಿದೇಶ

ಜಪಾನಿನ ಹಾಸ್ಯನಟ ಕೆನ್ ಶಿಮುರಾ ಕರೋನಾ ವೈರಸ್‌ ಸೋಂಕಿನಿಂದ ನಿಧನ

ದೇಶ(ನವದೆಹಲಿ)ಮಾ.30:- ಕೊರೋನಾ ವೈರಸ್ ಇಡಿ  ಪ್ರಪಂಚದಾದ್ಯಂತ ವ್ಯಾಪಿಸಿದೆ. ಚೀನಾದಿಂದ ಪ್ರಾರಂಭಿಸಿ ಈ ವೈರಸ್ ಈಗ ಪ್ರಪಂಚದಾದ್ಯಂತ ಅನೇಕ ಜನರನ್ನು ಬಲಿತೆಗೆದುಕೊಂಡಿದೆ.    ಜಪಾನ್‌ನ ಹಾಸ್ಯನಟ ಕೆನ್ ಶಿಮುರಾ ಕೂಡ ಕೊರೋನಾ ವೈರಸ್ ಸೋಂಕಿನಿಂದಲೇ ಸಾವನ್ನಪ್ಪಿದ್ದಾರೆ.

ಅವರಿಗೆ 70 ವರ್ಷ ವಯಸ್ಸಾಗಿತ್ತು. 1970 ರ ದಶಕದ ಅತ್ಯಂತ ಜನಪ್ರಿಯ ಹಾಸ್ಯನಟ ಇವರಾಗಿದ್ದರು. ಇತ್ತೀಚೆಗೆ ಅವರು ಉಸಿರಾಟದ ತೊಂದರೆ ಎದುರಿಸುತ್ತಿದ್ದರು.  ಅವರನ್ನು ಮಾರ್ಚ್ 19 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ  2016 ರಿಂದಲೇ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಕೂಡ ಇತ್ತು ಎನ್ನಲಾಗಿದೆ. ಅವರು ತಮ್ಮ  ಹಾಸ್ಯದ ಬಲದಿಂದಲೇ    1970 ಮತ್ತು 1980 ರ ದಶಕಗಳಲ್ಲಿ ಜಪಾನಿನ ಮನರಂಜನಾ ಜಗತ್ತನ್ನು ಆಳಿದರು. ಅವರ ನಿಧನದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬರುತ್ತಲೇ  ಜನತೆ  ಸಂತಾಪ ವ್ಯಕ್ತಪಡಿಸಿದ್ದಾರೆ. (ಏಜೆನ್ಸಿಸ್,ಎಸ್.ಎಚ್)

Leave a Reply

comments

Related Articles

error: