ಕರ್ನಾಟಕ

ಮಂಡ್ಯ ಜಿಲ್ಲೆ: ಅಬಕಾರಿ ಅಕ್ರಮದ ಬಗ್ಗೆ ದೂರು ದಾಖಲಿಸಲು ವಲಯವಾರು ಕಂಟ್ರೋಲ್ ರೂಂ

ಮಂಡ್ಯ (ಮಾ.30): ನೋವೆಲ್ ಕೊರೋನಾ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಸಂಬಂಧವಾಗಿ ರಾಜ್ಯಾದ್ಯಾಂತ ಮಧ್ಯ ಮಾರಾಟವನ್ನು ನಿಷೇಧ ಮಾಡಿರುವ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಅಬಕಾರಿ ಅಕ್ರಮಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ದೂರುಗಳನ್ನು ದಾಖಲಿಸಲು ಅನುಕೂಲವಾಗುವಂತೆ ಜಿಲ್ಲಾ/ ಉಪವಿಭಾಗ/ ವಲಯವಾರು ಕಂಟ್ರೋಲ್ ರೂಂ ತೆರೆಯಲಾಗಿದೆ.

ಮಂಡ್ಯ ಜಿಲ್ಲೆಯಾದ್ಯಂತ ಇರುವ ಎಲ್ಲಾ ವಿಧದ ಮದ್ಯದಂಗಡಿಗಳನ್ನು ಈಗಾಗಲೆ ಮುಚ್ಚಿಸಿ ಸೀಲ್ ಮಾಡಲಾಗಿದ್ದು, ಒಂದುವೇಳೆ ಸದರಿ ಮದ್ಯಯದ ಅಂಗಡಿ/ಬಾರ್/ಹೋಟೆಲ್‍ಗಳಲ್ಲಿ ಮದ್ಯ ಮಾರಾಟ ಕಂಡು ಬಂದಲ್ಲಿ ಹಾಗೂ ಪೆಟ್ಟಿ ಅಂಗಡಿಗಳು ತೋಟದ ಮನೆ, ಆಲೆಮನೆ, ಮಿಲ್ಟ್ರಿ ಹೋಟೆಲ್, ಡಾಬಾಗಳಲ್ಲಿ ಅಕ್ರಮವಾಗಿ ಮದ್ಯ, ಮದ್ಯಸಾರ, ಸೇಂದಿ, ಕಳ್ಳಭಟ್ಟಿ, ಇತ್ಯಾದಿಗಳ ತಯಾರಿಕೆ ಸಂಗ್ರಹಣೆ ಸಾಗಾಣಿಕೆ, ಮಾರಾಟ ಮುಂತಾದ ಅಬಕಾರಿ ಅಕ್ರಮಗಳು ಕಂಡುಬಂದಲ್ಲಿ ಸಾರ್ವಜನಿಕರು ಸಂಬಂಧಪಟ್ಟ ಕಂಟ್ರೋಲ್‍ ರೂಮ್‍ಗಳಿಗೆ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಪರ್ಕಿಸಬೇಕಾದ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆಗಳ ವಿವರ:

  • ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್‍ರವರ ಕಚೇರಿ ಮಂಡ್ಯ :08232-220313 ಮೊಬೈಲ್ ಸಂಖ್ಯೆ:9449597188
  • ಅಬಕಾರಿ ಉಪ ಅಧೀಕ್ಷಕರ ಕಛೇರಿ ಮಂಡ್ಯ :08232-224426/9449597191
  • ಅಬಕಾರಿ ಉಪ ಅಧೀಕ್ಷಕರ ಕಛೇರಿ ಪಾಂಡವಪುರ ದೂರವಾಣಿ ಸಂಖ್ಯೆ: 08236-255652/9449597193
  • ಅಬಕಾರಿ ನಿರೀಕ್ಷಕರ ಕಚೇರಿ ಕೆ.ಆರ್.ಪೇಟೆ ದೂರವಾಣಿ ಸಂಖ್ಯೆ: 08230-263524/9449597192
  • ಮಂಡ್ಯ ದೂರವಾಣಿ ಸಂಖ್ಯೆ:08232-230439/9449597189
  • ಮದ್ದೂರು ದೂರವಾಣಿ ಸಂಖ್ಯೆ: 08237-236126/9845095620
  • ಮಳವಳ್ಳಿ ದೂರವಾಣಿ ಸಂಖ್ಯೆ:08231-243938/9449597190
  • ಶ್ರೀರಂಗಪಟ್ಟಣ ದೂರವಾಣಿ ಸಂಖ್ಯೆ: 08236-252559/9449597194
  • ನಾಗಮಂಗಲ ದೂರವಾಣಿ ಸಂಖ್ಯೆ: 08234-286225/9844199119 ಗೆ ಸಂಪರ್ಕಿಸಬಹುದು.

(ಎನ್.ಬಿ)

Leave a Reply

comments

Related Articles

error: