ಪ್ರಮುಖ ಸುದ್ದಿ

ವಲಸೆ ಕಾರ್ಮಿಕರಿಗೆ ದಿನ ಬಳಕೆ ವಸ್ತು ಪೂರೈಕೆ

ರಾಜ್ಯ( ಮಡಿಕೇರಿ) ಮಾ.31 :- ಶಿವಮೊಗ್ಗ ಮತ್ತು ಪಿರಿಯಾಪಟ್ಟಣದಿಂದ ದಿನಗೂಲಿಗಾಗಿ ಜಿಲ್ಲೆಗೆ ಆಗಮಿಸಿದ್ದ 13 ಜನ ಕಟ್ಟಡ ಕಾರ್ಮಿಕರಿಗೆ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ವತಿಯಿಂದ ಅಗತ್ಯ ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಯಿತು.
ನಗರದ ಸರ್ಕಾರಿ ಬಸ್ ನಿಲ್ದಾಣದ ಹಿಂಬದಿ ಶೆಡ್‍ಗಳಲ್ಲಿ ವಾಸವಿದ್ದ ಕಾರ್ಮಿಕರಿಗೆ ಸೋಮವಾರ ಅಧಿಕಾರಿಗಳ ಸಮಕ್ಷಮದಲ್ಲಿ ದಿನಸಿ ಪದಾರ್ಥಗಳನ್ನು ಪೂರೈಸಲಾಯಿತು.
ಶಿವಮೊಗ್ಗ ಜಿಲ್ಲೆಯ ಹಾಹೊಳೆ ಗ್ರಾಮದ ಭೋವಿ ಕಾಲೋನಿಯ 7 ಜನ ಕಾರ್ಮಿಕರು, 4 ಮಕ್ಕಳು ಮತ್ತು ಪಿರಿಯಾಪಟ್ಟಣದ ಇಬ್ಬರು ವಯೋವೃದ್ಧರು ಸೇರಿದಂತೆ ಮುಂದಿನ ಏಪ್ರಿಲ್ 14 ರ ವರೆಗೆ ಅವಶ್ಯವಿರುವಷ್ಟು ದಿನಸಿ ಪದಾರ್ಥಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
ಈ ಸಂಧರ್ಭ 50 ಕೆ.ಜಿ ಅಕ್ಕಿ, 3 ಕೆ.ಜಿ ತೊಗರಿ ಬೇಳೆ, 3 ಕೆ.ಜಿ ಕಡಲೆ ಬೇಳೆ, 3 ಕೆ.ಜಿ ಹೆಸರುಕಾಳು, ಬಟ್ಟೆ ತೊಳೆಯುವ ಸೋಪು 12, ಸ್ನಾನದ ಸೋಪು 24, ಕ್ಯಾಂಡಲ್ 10, ಕಡ್ಡಿಪೆಟ್ಟಿಗೆ 1, ಕೊಬ್ಬರಿ ಎಣ್ಣೆ 4 ಬಾಟಲ್, ಅಡುಗೆ ಎಣ್ಣೆ 5 ಲೀಟರ್, ಖಾರದಪುಡಿ 1 ಕೆ.ಜಿ, ಸಕ್ಕರೆ 5 ಕೆ.ಜಿ, ಹಾಲಿನ ಪುಡಿ 1 ಕೆ.ಜಿ, ಟೀ ಪುಡಿ 1 ಕೆ.ಜಿ, ಹುಣಸೆ ಹಣ್ಣು 2 ಕೆ.ಜಿ, ರಾಗಿ ಹಿಟ್ಟು 5 ಕೆ.ಜಿ, ಟೂತ್ ಪೇಸ್ಟ್ 3, ಟೂತ್ ಬ್ರಷ್ 13, ಬೆಳ್ಳುಳ್ಳಿ 1ಕೆ.ಜಿಯಂತೆ ಕಾರ್ಮಿಕರಿಗೆ ವಿತರಿಸಲಾಯಿತು.
ಮಡಿಕೇರಿ ತಾಲೂಕು ತಹಶೀಲ್ದಾರರಾದ ಪಿ.ಎಸ್ ಮಹೇಶ್, ಪೌರಾಯುಕ್ತರಾದ ಎಮ್.ಎಲ್ ರಮೇಶ್, ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಮ್.ಎಮ್ ಯತ್ನಟ್ಟಿ ಇತರರು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: