ಮೈಸೂರು

ಎಂಸಿಡಿಸಿಸಿ ಬ್ಯಾಂಕ್ ವತಿಯಿಂದ 8000 ಕಿಟ್ ವಿತರಣೆ

ಮೈಸೂರು,ಮಾ.31:- ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಿನ್ನೆ ಕೋವಿಡ್-19ಅನ್ನು ತಡೆಗಟ್ಟಲು ಉನ್ನತ ಮಟ್ಟದ ಸಭೆ ನಡೆಸಲಾಯಿತು.

ಈ ವೇಳೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ವತಿಯಿಂದ 8000 ಕಿಟ್ ವಿತರಣೆ ಮಾಡಲಾಯಿತು. ಪ್ರತಿ ಕಿಟ್ಟಿನಲ್ಲಿ ತಲಾ ಒಂದು N95 ಮಾಸ್ಕ್, ಒಂದು ಸಾನಿಟೈಸರ್, ಒಂದು ಸೋಪ್ ಇರಲಿದೆ.

5000 ಕಿಟ್’ಗಳನ್ನು ಮೈಸೂರಿನ ಭಾಗಕ್ಕೆ ಹಾಗೂ 3000 ಕಿಟ್’ಗಳನ್ನು ಚಾಮರಾಜನಗರ ಜಿಲ್ಲೆಗೆ ಹಂಚುವಂತೆ  ಸಚಿವರಾದ ವಿ ಸೋಮಣ್ಣ ಅವರ ಮುಖಾಂತರ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.

ಈ ಸಂದರ್ಭ ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮತ್ತಿತರರು ಉಪಸ್ಥಿತರಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: