ಮೈಸೂರು

ಕೊರೋನಾ ಶಂಕಿತರನ್ನು ನಿರ್ಜನ ಪ್ರದೇಶಗಳಿಗೆ ವರ್ಗಾಯಿಸಿ ವೈರಸ್ ಹರಡದಂತೆ  ಕ್ರಮವಹಿಸಲು ಒತ್ತಾಯಿಸಿ ಮನವಿ

ಮೈಸೂರು,ಮಾ.31:-  ದೇಶದಲ್ಲಿರುವ ಕೊರೋನಾ ಶಂಕಿತರನ್ನು ಹೆಚ್ಚಿನ ಜನ ಸಂದಣಿ ಇಲ್ಲದಿರುವ ಪಟ್ಟಣಗಳ ಹೊರ ನಿರ್ಜನ ಪ್ರದೇಶಗಳಿಗೆ  ಈ ಕೂಡಲೇ ವರ್ಗಾಯಿಸಿ 130 ಕೋಟಿ ಜನರಿಗೆ ಕೊರೋನಾ ಕಾಡ್ಗಿಚ್ಚಿನಂತೆ ಹರಡದಂತೆ  ಕ್ರಮವಹಿಸಲು ಒತ್ತಾಯಿಸಿ ಕೇಂದ್ರ & ರಾಜ್ಯ ಸರ್ಕಾರಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮನವಿ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಅವರು ಇಡೀ ಭಾರತದಲ್ಲಿರುವ ಕೊರೋನಾ ವೈರಸ್ ಶಂಕಿತರು 137 ಕೋಟಿ ಭಾರತೀಯರ ಮಧ್ಯೆ ಇರುವುದರಿಂದ, ದೇಶದ ಜನರಿಗೆಲ್ಲ ಕೊರೋನಾ ಹರಡಬಹುದೆಂಬ ಹೆದರಿಕೆಯಿಂದ   ಪ್ರಧಾನ ಮಂತ್ರಿಗಳು ದೇಶದ ಜನರನ್ನೆಲ್ಲ ಮನೆಯಲ್ಲಿ ಕೂರಿಸಿ, ” 21 ದಿನ ಮನೆಯಲ್ಲಿಯೇ ಇರಿ” ಎಂದು ಕೊರೋನಾ  ಹರಡದಂತೆ ಮುನ್ನೆಚ್ಚರಿಕೆ ವಹಿಸಿರುವುದು ಅವರಿಗೆ ದೇಶದ ಜನರ ಮೇಲಿರುವ ಅಪಾರ ಕಾಳಜಿಯಾಗಿದೆ.  ಭಾರತ – ಕರ್ನಾಟಕವನ್ನು ಒಂದೇ ವಾರದಲ್ಲಿ ಕೊರೋನಾ ಮುಕ್ತ ಮಾಡಬಹುದು. ಭಾರತದಲ್ಲಿನ ಕೊರೋನಾ ವೈರಸ್ ನ್ನು ಹೇಗೆ ಅತಿ ಬೇಗನೆ ಶೂನ್ಯ ಗೊಳಿಸಬಹುದೆಂದರೆ, 137 ಕೋಟಿ ಜನಸಂಖ್ಯೆ ಇರುವ ನಮ್ಮ ಇಡೀ ಭಾರತವನ್ನೇ ಸುಮಾರು 21 ದಿನಗಳ ಕಾಲ ಲಾಕ್ ಡೌನ್ ಮಾಡಿ ಲಕ್ಷಾಂತರ ಕೋಟಿ ವ್ಯಯ ಮಾಡುವ ಬದಲು, ಕೊರೋನಾ ಶಂಕಿತರನ್ನೇ ಜನ ಸಂದಣಿ ಇಲ್ಲದಿರುವ ಅಕ್ಕಪಕ್ಕದ ಪಟ್ಟಣಗಳ ಹೊರ ನಿರ್ಜನ ಪ್ರದೇಶ, ದ್ವೀಪಗಳಿಗೆ ಸ್ಥಳಾಂತರಿಸಿ ಫೈವ್ ಸ್ಟಾರ್, ವಿವಿಐಪಿ ಹಾಸ್ಪಿಟಾಲಿಟಿ ಸೇವೆಯನ್ನು  ನೀಡಿ ಇವರನ್ನು ಪ್ರತ್ಯೇಕವಾಗಿ ಇರಿಸಿ ಮತ್ತಷ್ಟು ಜನರಿಗೆ ಹರಡದಂತೆ ಸುಲಭವಾಗಿ  ತಡೆಗಟ್ಟಬಹುದು  ಎಂದಿದ್ದಾರೆ.

ಸರ್ಕಾರ ಈ ಪ್ರಯತ್ನ ಮಾಡಿದರೆ ಕೊರೋನಾ ವೈರಸ್ ಅನ್ನು ಹರಡದಂತೆ ಬೇರು ಸಮೇತ ಸುಲಭವಾಗಿ  ಕಿತ್ತು ಹಾಕಿ ಭಾರತದಿಂದ ಓಡಿಸಬಹುದು.  ಹಿಂದೆ ಬ್ರಿಟೀಷರು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ದೇಶದ ಜನರಲ್ಲಿ  ಸ್ವಾತಂತ್ರ್ಯದ ಕಿಚ್ಚು ಹರಡಿಸುತ್ತಾರೆಂದು ಅವರನ್ನು ಅಂಡಮಾನ್ ನಲ್ಲಿ ಬಂಧಿಯಾಗಿ ಇಡುತ್ತಿದ್ದರು . ಆ ರೀತಿ ಈಗ ಕೊರೋನಾ ವೈರಸ್ ಶಂಕಿತರನ್ನು ಪಟ್ಟಣಗಳ ಹೊರ ನಿರ್ಜನ ಪ್ರದೇಶಗಳಲ್ಲಿ  ಇರಿಸಿ ದೇಶ ವ್ಯಾಪಿ ಹರಡದಂತೆ ತಡೆಗಟ್ಟಬಹುದು ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: