ಮೈಸೂರು

ಜನಸಂದಣಿ ನಿಯಂತ್ರಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮೈಸೂರು ನಗರದ ವಿವಿಧ ಬಡಾವಣೆಗಳಲ್ಲಿ ಒಟ್ಟು 7ಮಾರುಕಟ್ಟೆ ಸ್ಥಾಪನೆ : ಆಯುಕ್ತ ಗುರುದತ್ ಹೆಗಡೆ

ಮೈಸೂರು,ಮಾ.31:- ನೋವೆಲ್ ಕೊರೋನಾ ವೈರಸ್ ತಡೆಗಟ್ಟುವ ಸಂಬಂಧ ಮುಂಜಾಗ್ರತಾ ಕ್ರಮವಾಗಿ ನಗರದ ಎಂ.ಜಿ.ರಸ್ತೆಯ ತರಕಾರಿ ಮಾರುಕಟ್ಟೆಯನ್ನು ವಸ್ತು ಪ್ರದರ್ಶನ ಪ್ರಾಧಿಕಾರದ ಮೈದಾನಕ್ಕೆ ಸ್ಥಳಾಂತರ ಮಾಡಲಾಗಿದ್ದರೂ ಸಹ ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಲ್ಲಿ ನಿಯಮಗಳನ್ನು ಪಾಲಿಸುತ್ತಿಲ್ಲವಾದ ಕಾರಣ, ಸಾರ್ವಜನಿಕರ ಹಿತದೃಷ್ಟಿಯಿಂದ ಮೈಸೂರು ನಗರದ ವಿವಿಧ ಬಡಾವಣೆಗಳಲ್ಲಿ ಒಟ್ಟು 7ಮಾರುಕಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ತಿಳಿಸಿದ್ದಾರೆ.

ಇಂದು ಮಾಧ್ಯಮ ಹೇಳಿಕೆ ನೀಡಿರುವ ಅವರು ನಗರದ ವಿವಿಧ ಸ್ಥಳಗಳಲ್ಲಿ 7ಮಾರುಕಟ್ಟೆಟಗಳನ್ನು ಸ್ಥಾಪಿಸುವ ಮೂಲಕ ಸಾರ್ವಜನಿಕರಿಗೆ ಅವರವರ ಮನೆಗಳಿಗೆ ಹತ್ತಿರವಾದ ಮಾರುಕಟ್ಟೆಗಳಲ್ಲಿ ತರಕಾರಿ, ಹಣ್ಣು ಹಾಗೂ ಇನ್ನಿತರೆ ದಿನಬಳಕೆಯ ವಸ್ತುಗಳನ್ನು ಖರೀದಿಸಲು ಅನುಕೂಲ ಮಾಡಲಾಗಿದ್ದು ಸಾರ್ವಜನಿಕರು ವ್ಯಾಪಾರ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಸಹ ಕೈಗೊಂಡಂತಾಗುತ್ತದೆ. ಅದರಂತೆ ಮೈಸೂರು ನಗರದ ವಿವಿಧ ಸ್ಥಳಗಳಲ್ಲಿ ತೆರೆಯಲಾಗಿರುವ ಮಾರುಕಟ್ಟೆಗಳಲ್ಲಿ ಉಸ್ತುವಾರಿ ಕಾರ್ಯನಿರ್ವಹಿಸಲು ಸಿಬ್ಬಂದಿಗಳನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

ಆಹಾರಮೇಳ ಮೈದಾನ ಲಲಿತ್ ಮಹಲ್ ಹೋಟೆಲ್ ಪಕ್ಕ ವಲಯ ಕಛೇರಿ ಒಂದರ ವ್ಯಾಪ್ತಿಯಲ್ಲಿ ಜನಗಣತಿ ವಿಭಾಗದ ರವೀಶ್, ಆಶ್ರಯ ವಿಭಾಗದ ಜಯರಾಮ್, ಮಂಜುನಾಥ್, ಹೆಚ್ಚುವರಿ ಆಯುಕ್ತರ ವಿಭಾಗದ ರೋಹಿತ್ ಅವರನ್ನು ನೇಮಿಸಲಾಗಿದ್ದು, ಟಿ.ನರಸೀಪುರದಿಂದ ವಾಜನಗಳು ಬರಲಿವೆ.

ವಸ್ತುಪ್ರದರ್ಶನ ಮೈದಾನ ಎಂ.ಜಿ.ರಸ್ತೆ ವಲಯ ಕಛೆರಿ-1ರ ವ್ಯಾಪ್ತಿ  ವಲಯ ಕಛೇರಿ 2ರ ಲೆಕ್ಕಿಗ ಎನ್.ಶ್ರೀನಿವಾಸ್, ವಲಯ ಕಛೇರಿ 3 ರ ಲೆಕ್ಕಿಗ ಚಂದ್ರಶೇಖರ್, ವಲಯ ಕಛೇರಿ 2ರ ಪ್ರಸಾದ್, ಬಡತನ ನಿರ್ಮೂಲನ ವಿಭಾಗದ ಸಿದ್ಧರಾಜು, ಜನಗಣತಿ ವಿಭಾಗ ವಿನಯ್ ಟಿ.ನರಸೀಪುರದಿಂದ ವಾಹನ ಬರಲಿದೆ.

ಬೆಮೆಲ್ ಲಾಸ್ಟ್ ಬಸ್ ಸ್ಟ್ಯಾಂಡ್ ಹತ್ತಿರದ ಶ್ರೀರಾಂಪುರ ವಲಯ ಕಛೇರಿ-2ರ ವ್ಯಾಪ್ತಿಯಲ್ಲಿ ಚುನಾವಣಾ ವಿಭಾಗದ ಜಯರಾಮ್, ವಲಯಕಛೇರಿ-1ರ ಲಕ್ಷ್ಮಿನಾರಾಯಣ, ಬಡತನ ನಿರ್ಮೂಲನ ವಿಭಾಗದ ಆದರ್ಶ್ ಕುಮಾರ್, ಚುನಾವಣಾ ವಿಭಾಗ ಶಿವರಾಜು, ಹೆಚ್.ಡಿ.ಕೋಟೆಯಿಂದ ವಾಹನ ಬರಲಿದೆ.

ದೇವನೂರು 1ನೇ ಹಂತ, ಸ್ಟೇಡಿಯಂ ನಿರ್ಮಾ ಮಸೀದಿ ಹತ್ತಿರ ವಲಯ ಕಛೇರಿ-8ರ ವ್ಯಾಪ್ತಿಯಲ್ಲಿ ಜಿ.ಮೋಹನ್, ರಾಜಶೇಖರ್, ಬನ್ನೂರು ಮತ್ತು ಮಳವಳ್ಳಿಯಿಂದ ವಾಹನ ಬರಲಿದೆ.

ಚಾಮುಮಡಿವಿಹಾರ ಸ್ಟೇಡಿಯಂ ಮೈದಾನ ವಲಯ ಕಛೇರಿ-9ರ ವ್ಯಾಪ್ತಿ , ಅಧೀಕ್ಷಕ ಅಭಿಯಂತರ ಎಸ್.ರವಿ, ಅಧೀಕ್ಷಕರ ಅಭಿಯಂತರ ಉಮೇಶ್, ಚುನಾವಣಾ ವಿಭಾಗದ ಸತೀಶ್, ಆರೋಗ್ಯ ವಿಭಾಗದ ಸ್ಯಾನಿಟರಿ ಸೂಪರ್ ವೈಸರ್ ಫಿಲೋಮಿನಾ ರಾಜ್ ಇರಲಿದ್ದು, ಬನ್ನೂರು ಮತ್ತು ಮಳವಳ್ಳಿಯಿಂದ ವಾಹನ ಬರಲಿದೆ.

ವಿಜಯನಗರ 2ನೇ ಹಂತ ಸಂಡೇ ಮಾರುಕಟ್ಟರ ವಲಯ ಕಛೇರಿ-3ರ ವ್ಯಾಪ್ತಿ ಹೆಚ್.ಪಿ.ಶಿವಣ್ಣ, ಸತ್ಯನಾರಾಯಣ ಜೋಶಿ, ಪುಟ್ಟನಾಗರಾಜು, ನಾಗರಾಜು ಇರಲಿದ್ದು, ಹುಣಸೂರಿನಿಂದ ವಾಹನ ಬರಲಿದೆ.

ಬನ್ನಿಮಂಟಪದ ಮೈದಾನ ಬೆಂಗಳೂರು ರಸ್ತೆ ವಲಯ ಕಛೇರಿ -7ಜಿ.ಮೋಹನ್, ಮಣಿ, ವಿಜಯ್ ಕುಮಾರ್ ಅವರನ್ನು ನೇಮಕ ಮಾಡಲಾಗಿದ್ದು, ಕೆ.ಆರ್.ಎಸ್, ಶ್ರೀರಂಗಪಟ್ಟಣ, ಪಾಲಹಳ್ಳಿ ಹಾಗೂ ಆನಂದೂರು ಇಲ್ಲಿಂದ ವಾಹನ ಬರಲಿದೆ.

ಪ್ರತಿಯೊಂದು ಮಾರುಕಟ್ಟೆಗಳಲ್ಲಿ ರೈತರ ಗಾಡಿಗಳಿಗೆ 12*15ಅಳತೆಯ ಬಾಕ್ಸ್ ಗಳನ್ನು ಬಣ್ಣದಲ್ಲಿ ಮಾರ್ಕಿಂಗ್ ಮಾಡಿಸಲು ಹಾಗೂ ವ್ಯಾಪಾರ ಸ್ಥಳಗಳಲ್ಲಿ ರೈತರಿಗೆ/ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಸೂಕ್ತ ಸ್ಥಳಾವಕಾಶ  ಮತ್ತು ವಾಹನ ನಿಲುಗಡೆಯ ಅಗತ್ಯ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಯಾವುದೇ ರೀತಿಯ ಸಮಸ್ಯೆಗಳು ಉಂಟಾದಲ್ಲಿ ನಿವಾರಿಸುವ ಜವಾಬ್ದಾರಿಯನ್ನು ನಿರ್ವಹಿಸಲು ಸಂಬಂಧಪಟ್ಟ ವಲಯ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮಾರುಕಟ್ಟೆ ವ್ಯಾಪಾರಸ್ಥರು ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ವ್ಯಾಪಾರ ಸಾಮಾಗ್ರಿಗಳನ್ನು ಗುರುತಿಸಿದ ಚೌಕಟ್ಟುಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಕುರಿತು ನೋಡಿಕೊಳ್ಳಬೇಕು. ಪದಾರ್ಥಗಳನ್ನು ಕೊಂಡುಕೊಳ್ಳಲು ಬರುವ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಸರದಿ ಸಾಲಿನಲ್ಲಿ ನಿಂತು ವ್ಯಾಪಾರ ಮಾಡುತ್ತಿದ್ದಾರೆಯೇ ಎಂಬುದನ್ನು ಪರಿವೀಕ್ಷಿಸಬೇಕು. ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಲ್ಲಿ ಯಾವುದೇ ರೀತಿಯ ಗೊಂದಲ/ಗಲಾಟೆ ಆಗದಂತೆ ವ್ಯಾಪಾರ-ವಹಿವಾಟು ನಡೆಸುವ ಕುರಿತು ತಿಳಿ ಹೇಳಬೇಕು. ವ್ಯಾಪಾರಸ್ಥರಿಗೆ, ಸಾರ್ವಜನಿಕರಿಗೆ ಮಾಸ್ಕ್ ಧರಿಸಲು ತಿಳಿಸಬೇಕು ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: