ಮೈಸೂರು

ಅನಗತ್ಯವಾಗಿ ರಸ್ತೆಯಲ್ಲಿ ಓಡಾಡಿ ನಿಯಮ ಉಲ್ಲಂಘನೆ : ಮೈಸೂರು ನಗರದಲ್ಲಿ 303 ವಾಜನ ಸೀಜ್

ಮೈಸೂರು,ಮಾ.31:- ಮೈಸೂರು ಜಿಲ್ಲೆಯಲ್ಲಿ  ಕೊರೋನಾ ವೈರಸ್ ತಡೆಗಟ್ಟುವ ಹಿನ್ನಲೆಯಲ್ಲಿ  ಲಾಕ್ ಡೌನ್ ಘೋಷಿಸಲಾಗಿದ್ದು, ಮೈಸೂರು ನಗರ/ ಜಿಲ್ಲೆಯಲ್ಲಿ  ತುರ್ತು ಸಂದರ್ಭದಲ್ಲಿ ಹೊರತುಪಡಿಸಿ ಸಾರ್ವಜನಿಕರು ಹೊರಬರದಂತೆ ಸೂಚಿಸಲಾಗಿದ್ದು, ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಅನಗತ್ಯವಾಗಿ ಮನೆಯಿಂದ ಹೊರಬಂದು ನಿಯಮ ಉಲ್ಲಂಘಿಸಿದರೆ ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಆದೇಶ ಹೊರಡಿಸಿದ್ದರು.

ಅದರಂತೆ ಮಾರ್ಚ್ 30 ರಂದು ಮೈಸೂರು ನಗರ ವ್ಯಾಪ್ತಿಯಲ್ಲಿ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡಿ ನಿಯಮ ಉಲ್ಲಂಘಿಸಿದವರ ವಾಹನ ಸೀಜ್ ಮಾಡಿ ಮನೆಗೆ ಕಳುಹಿಸಿದ್ದಾರೆ.

ಎನ್.ಆರ್ ಠಾಣೆ, ಮಂಡಿ, ವಿವಿ.ಪುರಂ, ಮೇಟಗಳ್ಳಿ,ವಿಜಯನಗರ,ಹೆಬ್ಬಾಳ್,ದೇವರಾಜ,ಲಷ್ಕರ್,ನಜರ್ ಬಾದ್, ಉದಯಗಿರಿ,ಆಲನಹಳ್ಳಿ, ಕೆ.ಆರ್,ಲಕ್ಷ್ಮೀಪುರಂ,ಅಶೋಕಪುರಂ,ವಿದ್ಯಾರಣ್ಯಪುರಂ, ಸರಸ್ವತಿಪುರಂ,ಕುವೆಂಪು ನಗರ ಪೋಲಿಸ್ ಠಾಣೆಯಲ್ಲಿ   ದ್ವಿಚಕ್ರ ವಾಹನ-285,ತ್ರಿ ಚಕ್ರ ವಾಹನ-10,ನಾಲ್ಕು ಚಕ್ರವಾಹನ-08, ಒಟ್ಟು 303 ವಾಹನಗಳ ಸೀಜ್ ಮಾಡಲಾಗಿದೆ ಎಂದು ಮೈಸೂರು ಡಿಸಿಪಿ ಡಾ. ಪ್ರಕಾಶ್ ಗೌಡ  ಈ ದಿನ ಮಾಹಿತಿ‌‌ ನೀಡಿದ್ದಾರೆ.

ಇವತ್ತೂ ಕೂಡ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡಿ ನಿಯಮ ಉಲ್ಲಂಘಿಸಿದವರ ವಾಹನಗಳನ್ನು ಸೀಜ್ ಮಾಡಿ ಪೊಲೀಸರು ಕ್ರಮ ಕೈಗೊಳ್ಳುತ್ತಿರುವುದು ನಗರದ ವಿವಿಧೆಡೆ ಕಂಡು ಬಂತು. ಲಾಕ್ ಡೌನ್ ಮುಗಿದ ನಂತರ ಮಾಲೀಕರಿಗೆ ವಾಹನಗಳು ಸಿಗಲಿವೆ. ಸಿಸಿ ಕ್ಯಾಮರಾಗಳು ಕಣ್ಗಾವಲಿದ್ದು, ಅದರ ಮಾಹಿತಿಯಾಧರಿಸಿ ಮಾಹನ ಮಾಲೀಕರಿಗೆ ನೋಟೀಸ್ ಕಳುಹಿಸಲಾಗುತ್ತಿದೆ.   (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: