ಪ್ರಮುಖ ಸುದ್ದಿಮನರಂಜನೆ

ಸಿಎಂ ಪರಿಹಾರ ನಿಧಿಗೆ ನಟ ಪುನೀತ್ ರಾಜ್ ಕುಮಾರ್ 50ಲಕ್ಷರೂ. ದೇಣಿಗೆ

ರಾಜ್ಯ(ಬೆಂಗಳೂರು)ಮಾ.31:- ಕೊರೋನಾ ಮಹಾಮಾರಿ ರಾಜ್ಯಾದ್ಯಂತ ಹೆಚ್ಚಾಗುತ್ತಿದ್ದು ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಕೊರೋನಾ ಸಿಎಂ ಪರಿಹಾರ ನಿಧಿಗೆ ನಟ ಪುನೀತ್ ರಾಜ್ ಕುಮಾರ್ 50ಲಕ್ಷರೂ. ದೇಣಿಗೆ ನೀಡಿದ್ದಾರೆ.

ಇಂದು ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪನವರನ್ನು  ಭೇಟಿ ಮಾಡಿದ  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊರೋನಾ ವಿರುದ್ಧದ ಸರ್ಕಾರದ ಹೋರಾಟಕ್ಕೆ ಸಾಥ್ ನೀಡಿದರು.  ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ 50 ಲಕ್ಷ ರೂಪಾಯಿ ಚೆಕ್ ನೀಡಿ ಮಾನವೀಯತೆ ಮೆರೆದಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು ಸರ್ಕಾರ ಏನು ಆದೇಶ ನೀಡುತ್ತದೆ ಅದನ್ನು ಪಾಲಿಸಲೇ ಬೇಕು. ಅವರು ನಮ್ಮ ಒಳ್ಳೆಯದಕ್ಕಾಗಿಯೇ ಹೇಳುತ್ತಾರೆ. ಮನೆಯಿಂದ ಹೊರಗೆ ಬರದೆ ಅವರು ಹೇಳಿದ ನಿಯಮಗಳನ್ನು ಪಾಲಿಸಿ ಅದನ್ನೇ ನಾನು ಅಭಿಮಾನಿಗಳಿಗೆ ಕೇಳಿಕೊಳ್ಳುತ್ತಿರುವುದು ಎಂದರು.

ಪುನೀತ್ ಸಹಾಯ ಹಸ್ತಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: