ಮೈಸೂರು

ಡೀಸೆಲ್ ಖಾಲಿಯಾಗಿದೆ ಎಂದ ಬಂಕ್ ಮಾಲೀಕನ ಮೇಲೆ ದರ್ಪ ಮೆರೆದ ಮಹಿಳಾ ಎಸ್ ಐ : ವಿಡಿಯೋ ವೈರಲ್

ಮೈಸೂರು,ಮಾ.31:- ಡೀಸೆಲ್ ಖಾಲಿ ಆಗಿದೆ ಎಂದ ಪೆಟ್ರೋಲ್ ಡೀಸೆಲ್ ಬಂಕ್ ಮಾಲೀಕನಿಗೆ ಮಹಿಳಾ ಎಸ್ ಐ ಓರ್ವರು ಅವಾಚ್ಯ ಶಬ್ದಳಿಂದ ನಿಂದಿಸಿ ದರ್ಪ ಮೆರೆದ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ನಿನ್ನೆ ನಂಜನಗೂಡು ಪೊಲೀಸ್ ಠಾಣೆಯ ಎಸ್ ಐ ಯಾಸ್ಮಿನ್ ತಾಜ್ ಎಂಬವರು ನಂಜನಗೂಡು ಪಟ್ಟಣದಲ್ಲಿರುವ ಪದ್ಮನಾಭ ಎಂಬವರ ಮಾಲಿಕತ್ವದಲ್ಲಿರುವ ಬಂಕ್ ಒಂದಕ್ಕೆ ತೆರಳಿದ್ದರು. ಈ ವೇಳೆ ಅವರು ತಮ್ಮ ಪೊಲೀಸ್ ಜೀಪ್ ಗೆ ಡೀಸೆಲ್ ಹಾಕುವಂತೆ ಹೇಳಿದರು. ಡಿಸೇಲ್ ಮುಗಿದಿದೆ ಎಂದು ಅಲ್ಲಿದ್ದ ಕೆಲಸಗಾರರು ತಿಳಿಸಿದಾಗ ಮಾಲೀಕರಿಗೆ ಅವಾಚ್ಯ ಶಬ್ದಳಿಂದ ನಿಂದಿಸಿ ದರ್ಪ ಮೆರೆದಿದ್ದಾರೆ. ಘಟನೆಯ ದೃಶ್ಯಾವಳಿಯನ್ನು ಯಾರೋ ಸೆರೆ ಹಿಡಿದಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ. ಅಷ್ಟೇ ಅಲ್ಲದೇ ಪೊಲೀಸ್ ಎಂದ ಮಾತ್ರಕ್ಕೆ ಈ ರೀತಿ ವರ್ತಿಸಬೇಕಾ? ಎಂದು ಸಾರ್ವಜನಿಕರು  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಂಜನೂಡು ಠಾಣೆಯಿಂದ ತಕ್ಷಣಕ್ಕೆ ಅವರನ್ನು ತೆರವುಗೊಳಿಸಿ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಛೇರಿಗೆ ಬಂದು ಅಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ಹೊರಡಿಸಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: