ಮೈಸೂರು

ಲಾಕ್ ಡೌನ್ ವೇಳೆ ಹೊರಗಡೆ ಸಿಗುವ ಯಾವುದೇ ಮದ್ಯವಿದ್ದರೂ ಅದನ್ನು ವಿಷಪೂರಿತ ಮದ್ಯವೆಂದೇ ಪರಿಗಣಿಸಲಾಗುವುದು : ಕೆ.ಎಸ್.ಮುರಳಿ

ಮೈಸೂರು,ಮಾ.31:-  ಲಾಕ್ ಡೌನ್ ವೇಳೆ ಹೊರಗಡೆ ಸಿಗುವ ಯಾವುದೇ ಮದ್ಯವಿದ್ದರೂ ಅದನ್ನು ವಿಷಪೂರಿತ ಮದ್ಯವೆಂದೇ ಪರಿಗಣಿಸಲಾಗುವುದು. ಯಾಕೆಂದರೆ ಈ ವೇಳೆ ಯಾವುದೇ ಮದ್ಯದಂಗಡಿಗಳ  ಬಾಗಿಲು ತೆರೆಯುವುದಕ್ಕೆ ಅನುಮತಿ ನೀಡಿಲ್ಲ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತ ಕೆ.ಎಸ್.ಮುರಳಿ ತಿಳಿಸಿದರು.

ಅವರಿಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಫೇಸ್ ಬುಕ್ ಪೇಜ್ ನಲ್ಲಿ ನೇರ ಸಂದೇಶ ನೀಡಿದ್ದು 23/3/2020ರಿಂದ 14/4/2020ರವರೆಗೆ ಜಿಲ್ಲೆಯಾದ್ಯಂತ ಎಲ್ಲ ತರಹದ ಸನ್ನದು ಎಲ್ಲ ತರಹದ ಅಬಕಾರಿ ಸನ್ನದು ಮುಚ್ಚಿರುತ್ತದೆ. ಮದ್ಯ, ಸೇಂದಿ ಇನ್ಯಾವುದೇ ಮದ್ಯಕ್ಕೆ ಸಂಬಂಧಿಸಿದ, ಮಾದಕ ವಸ್ತುಗಳ ವಹಿವಾಟು ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಜಾರಿ ತನಿಖೆ ನಡೆಯುತ್ತಿದ್ದು, ಹೆಚ್ಚಿನ ಸಮಯವನ್ನು ಅದಕ್ಕೆ ಮೀಸಲಿಟ್ಟು ದಿನದ 24 ತಾಸು, ಅಷ್ಟೇ ಅಲ್ಲದೇ  ಸಾರ್ವಜನಿಕ ರಜಾದಿನ ಅವಶ್ಯಕತೆ ಬಿದ್ದರೆ ಮುಂದೆಯೂ ಕೂಡ ಜಾರಿ ಮತ್ತು ತನಿಖಾ ಕಾರ್ಯಗಳಲ್ಲಿ  ಕರ್ತವ್ಯ ನಿರ್ವಹಿಸುತ್ತೇವೆ ಎಂದರು. ಜನರಲ್ಲಿ ಕೇಳಿಕೊಳ್ಳುವುದೇನೆಂದರೆ ಅಕ್ಕಪಕ್ಕದಲ್ಲಿ ಯಾರಾದರೂ ಬಿಳಿಯ ಕ್ಯಾನ್ ಅಥವಾ ಕಲರ್ ಲೆಸ್ ದ್ರವ್ಯ ಅಥವಾ ಇನ್ನಾವುದೇ ದ್ರವ್ಯ ಸಾಗಿಸುವಾಗ ಘಾಟಿನ ವಾಸನೆ ಇದ್ದರೆ ಅದು ಖಂಡಿತ ಆಲ್ಕೋಹಾಲ್ ಗೆ ಸಂಬಂಧಿಸಿದ್ದು. ಸಾಕಷ್ಟು ಬಾರಿ ಏನಾಗುತ್ತದೆ ಅಂದರೆ ಆಲ್ಕೋಹಾಲ್ ಇದ್ದದ್ದು  ಮೆಥೆನಾಲ್ ಆಗ್ಬಿಟ್ಟರೆ ಅದು ವಿಷಪೂರಿತವಾಗಿಬಿಡುತ್ತದೆ. ಮದ್ಯ ವ್ಯಸನಿಗಳಾಗಿದ್ದರೆ ಮದ್ಯ ಸಿಕ್ತು ಅಂತ ಕುಡಿಯಲು ಹೋಗಬಾರದು. ಕಡಿಮೆ ದರದಲ್ಲೋ ಅಥವಾ ಹೆಚ್ಚಿನ ದರದಲ್ಲೋ ಮಾರಾಟ ಮಾಡುತ್ತಿದ್ದರೆ ಅದನ್ನು ಮದ್ಯ ಅಂತ ಸೇವಿಸಲು ಹೋದರೆ ಪ್ರಾಣಕ್ಕೆ ಸಂಚಕಾರ ಬರುತ್ತದೆ. ದಯವಿಟ್ಟು ಇಂತಹ ಸಮಯದಲ್ಲಿ ಎಕ್ಸೈಸ್ ಕಂಟ್ರೋಲ್ ರೂಂಗೆ ತಪ್ಪದೇ ಫೋನ್ ಮಾಡಿ ತಿಳಿಸಿ. ದಾಳಿ ಸಂದರ್ಭ ಮಾಹಿತಿ ನಿಖರವಾಗಿರಬೇಕು. 13ತಂಡಗಳು ದಿನ, ರಾತ್ರಿ ಕರ್ತವ್ಯ ನಿರ್ವಹಿಸುತ್ತಾರೆ. ಕೂಡಲೇ ಸ್ಥಳಕ್ಕೆ ಧಾವಿಸಿ ಅದನ್ನು ಸೀಜ್ ಮಾಡ್ತಾರೆ. ಕಾನೂನು ಕ್ರಮಕ್ಕೆ ಒಳಪಡಿಸ್ತಾರೆ. ಸಮಾಜಘಾತುಕ ಶಕ್ತಿಗಳಿಂದ ಸಮಾಜವನ್ನು, ಊರನ್ನು, ಮನೆಮಂದಿಯನ್ನು ರಕ್ಷಿಸೋಣ. ಕಂಟ್ರೋಲ್ ರೂಂ. ನಂಬರ್ 0821-2541863   ಕರೆ ಮಾಡಿ ತಿಳಿಸಿ. ಇದುವರೆಗೆ 48ಲೀಟರ್ ಸೇಂದಿಯನ್ನು ವಶಕ್ಕೆ ಪಡೆಯಲಾಗಿದೆ. ಈ ವೇಳೆ ಜನಸಂದಣಿ ಆಗಬಾರದು. ಕಳ್ಳಭಟ್ಟಿ, ಮದ್ಯ, ಯಾವುದೇ ರೀತಿಯ ಮದ್ಯ ಈಗ ಅದು ನಕಲಿ, ವಿಷಪೂರಿತ ಅಂತಲೇ ಪರಿಗಣಿಸಲಾಗುವುದು. ಮದ್ಯವ್ಯಸನದಿಂದ ದೂರವಿರಿ. ಸಮಾಜ, ದೇಶವನ್ನು ಕಾಪಾಡುವುದು ನಮ್ಮ ಹೊಣೆ ಎಂದು ತಿಳಿದುಕೊಂಡಿರಿ ಎಂದರು.

ಪೊಲೀಸ್, ಅಬಕಾರಿ ಅಧಿಕಾರಿಗಳು, ವೈದ್ಯರು ಎಲ್ಲರೂ ತಮ್ಮ ವೈಯುಕ್ತಿಕ ರಿಸ್ಕ್ ತೆಗೆದುಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮದ್ಯ ಸೇವಿಸುವವರು ಮದ್ಯವೇ ನಮ್ಮನ್ನು ಸೇವಿಸುವ ಸ್ಥಿತಿಯನ್ನು ತಂದುಕೊಳ್ಳಬಾರದು. ಜನಜೀವನದಲ್ಲಿ ಕಾಲ ತುಂಬಾ ಅಭಾವಕರವಾದ ವಸ್ತುವಾಗಿತ್ತು. ಜನಸಾಮಾನ್ಯರಿಗೆ ಅನುಕೂಲಕರ ವ್ಯವಸ್ಥೆ ಮಾಡಿಕೊಟ್ಟಿದೆ. ಸಮಯವನ್ನು ಸದುಪಯೋಗಪಡಿಸಿಕೊಳ್ಳಿ. ಧ್ಯಾನ ಮಾಡಿ. ವ್ಯಸನದಿಂದ ದೂರವಿರಿ. ಯಾವುದೇ ವಸ್ತುವಿನ ಆಳಾಗಿ ಇರಬಾರದು ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: