ಮೈಸೂರು

‘ಸಾಮಾಜಿಕ ಕಳಕಳಿಯ ಚಿಂತನಾ ಬಳಗ’ದಿಂದ ನಿರ್ಗತಿಕರಿಗೆ ಅಗತ್ಯ ವಸ್ತು ವಿತರಣೆ

ಮೈಸೂರು,ಮಾ.31:- ಕೊರೋನಾ ಮಹಾಮಾರಿ ಇಡೀ ವಿಶ್ವವನ್ನೇ ಸಂಕಷ್ಟಕ್ಕೆ ತಳ್ಳಿದೆ. ಸಾರ್ವಜನಿಕರು ಆಹಾರ, ಔಷಧ, ದಿನಬಳಕೆಯ ವಸ್ತುಗಳಿಗೆ ಇನ್ನಿಲ್ಲದ ಪಾಡು ಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ನಿರ್ಗತಿಕರು, ನಿರಾಶ್ರಿತರಿಗೆ ಕೈಲಾದ ಸಹಾಯ ಮಾಡಲು ವಿವಿಧ ವಲಯಗಳಲ್ಲಿ ದುಡಿಯುತ್ತಿರುವವರು ಒಟ್ಟಾಗಿ ಸೇರಿ ‘ಸಾಮಾಜಿಕ ಕಳಕಳಿಯ ಚಿಂತನಾ ಬಳಗ’ದ ಮೂಲಕ ವಿವಿಧ ಅಗತ್ಯ ವಸ್ತುಗಳನ್ನು ವಿತರಿಸುತ್ತಿದ್ದಾರೆ.

ಈಗಾಗಲೇ ಊಟ, ಸ್ಯಾನಿಟೈಸರ್, ಮಾಸ್ಕ್ ಗಳನ್ನು ನೀಡಲಾಗಿದ್ದು, ಇಂದು ನಂಜರಾಜ್ ಬಹದ್ದೂರ್ ಛತ್ರದ ಎದುರು ಸುಮಾರು 400ಜನ ನಿರ್ಗತಿಕರಿಗೆ ಪ್ರತಿಯೊಬ್ಬರಿಗೂ ಅಗತ್ಯ ವಸ್ತುಗಳನ್ನು ಒಳಗೊಂಡ ಒಂದು ಕಿಟ್ ವಿತರಿಸಲಾಯಿತು. ಒಂದು ಸಾವಿರ ರೂ.ಬೆಲೆಯ ಶರ್ಟ್, ಪ್ಯಾಂಟ್, ಅಂಡರ್ ವೇರ್, ಸ್ಯಾನಿಟೈಸರ್, ಸೋಪ್, ಟವೆಲ್, ಮಾಸ್ಕ್ ಗಳನ್ನು ಈ ಕಿಟ್ ಒಳಗೊಂಡಿದೆ. ಕಿಟ್ ನ್ನು ಡಿಸಿಪಿ ಡಾ. ಎನ್.ಪ್ರಕಾಶ್  ಗೌಡ ವಿತರಿಸಿದರು.

ಈ  ಒಳ್ಳೆಯ ಕಾರ್ಯಕ್ಕೆ  ಭೈರವ್ ಗ್ರೂಪ್ ಮಾಲೀಕರಾದ ಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಿ.ಜೆ.ದ್ವಾರಕೀಶ್, ಮಾಜಿ ಮೇಯರ್ ಎಂ.ಜಿ.ರವಿಕುಮಾರ್, ಗುತ್ತಿಗೆದಾರರಾದ ಲೋಕೇಶ್, ಬಿ.ಜಿ.ಸಂತೋಷ್, ಉದ್ಯಮಿಗಳಾದ ಚಕ್ಕೆರೆ ಶಿವಕುಮಾರ್, ಬಸವರಾಜು, ಉದ್ಯಮಿಗಳಾದ ಯಶವಂತ್, ಬಸಪ್ಪಾಜಿ, ರಾಕೇಶ್, ಗುತ್ತಿಗೆದಾರರಾದ ಸೀಳ್ನೆರೆ ಮೋಹನ್, ನಗರಪಾಲಿಕೆ ಮಾಜಿ ಸದಸ್ಯರು, ಅನಿಕೇತನ ಟ್ರಸ್ಟ್ ಅಧ್ಯಕ್ಷರಾದ ಕೆ.ವಿ.ಮಲ್ಲೇಶ್ ಕೈಜೋಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: