ಮೈಸೂರು

ಎಸ್ ಎಂ ಪಿ ಫೌಂಡೇಶನ್ ವತಿಯಿಂದ ಬಡವರಿಗೆ ಅಗತ್ಯ ವಸ್ತುಗಳು ಹಾಗೂ ತರಕಾರಿ ವಿತರಣೆ

ಮೈಸೂರು,ಮಾ.31:- ಕೊರೋನಾ ವೈರಸ್ ಹಿನ್ನಲೆ ಭಾರತ ಲಾಕ್ ಡೌನ್ ಆಗಿದ್ದು, ಎಸ್ ಎಂ ಪಿ ಫೌಂಡೇಶನ್  ಮೈಸೂರು ನಗರದ ಎಲ್ಲಾ ಕಡು ಬಡವರಿಗೆ ಅಗತ್ಯ ವಸ್ತುಗಳು ಹಾಗೂ ತರಕಾರಿಯನ್ನು ಉಚಿತವಾಗಿ ನೀಡಲು ಮುಂದಾಗಿದೆ.

ಜನರಿಗೆ ತರಕಾರಿ ಹಂಚಲು ಮೈಸೂರಿನ ಜೆಪಿ ನಗರದಲ್ಲಿ    ಎಸ್ ಎಂ ಪಿ ಟೀಂ ಬಟ್ಟೆ ಬ್ಯಾಗ್ ಗೆ ತರಕಾರಿ ತುಂಬುವ ಕೆಲಸ ನಡೆಸುತ್ತಿದೆ. ಈಗಾಗಲೇ ಕನಕಗಿರಿ,ಮೇದನ ಕೇರಿ,ಹಳೆ ಕೆಸರೆ,ಏಕಲವ್ಯ ನಗರ, ಗುಂಡೂರಾವ್ ನಗರದ ಜನರಿಗೆ ತರಕಾರಿ ಹಂಚಲಾಗಿದ್ದು, ಉಳಿದ ವಾರ್ಡ್ ಗಳಿಗೆ ಹಂಚಲಾಗುತ್ತದೆ. ನಿಮ್ಮ ಹಾಗೂ ನಿಮ್ಮ ಕುಟುಂಬದವರ ಆರೋಗ್ಯ ದೃಷ್ಟಿಯಿಂದ ಏಪ್ರಿಲ್ 15 ವರೆಗೂ ಮನೆಯಲ್ಲೆ ಇರಿ ಎಂದು ಎಸ್ ಎಂ ಪಿ ಫೌಂಡೇಶನ್ ನ ಸಂಸ್ಥಾಪಕ ಶಿವಪ್ರಕಾಶ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ಸಂದರ್ಭ ಈಶ್ವರ್,ಸದಾಶಿವ, ಕಾಂತ್ರಿದಳದ ತೇಜಸ್ವಿ ನಂದೀಶ್, ಸಚಿನ್, ಮಹದೇವ್, ನಾಗರಾಜು, ನವೀನ್, ಸುಪ್ರೀತ್,ಸುಮಂತ್,ಭಾಗ್ಯ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: