ಪ್ರಮುಖ ಸುದ್ದಿ

ಕೇರಳ ಗಡಿಯನ್ನು ಯಾವುದೇ ಕಾರಣಕ್ಕೂ ತೆರವು ಗೊಳಿಸುವುದಿಲ್ಲ : ಸಂಸದ ಪ್ರತಾಪ್ ಸಿಂಹ

ರಾಜ್ಯ(ಮಡಿಕೇರಿ)ಮಾ.31;- ಕೇರಳ ಗಡಿಯನ್ನು ಯಾವುದೇ ಕಾರಣಕ್ಕೂ ತೆರವು ಗೊಳಿಸುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು  ಶಾಸಕ ಬೋಪಯ್ಯ ಕೊಡಗು ಕೇರಳ ಗಡಿಗಳಾದ ಮಕುಟ್ಟ. ಕುಟ್ಟ ಮತ್ತು ಕರಿಕೆ ಬಂದ್ ಮಾಡಿದ್ದಾರೆ.  ಒಬ್ಬ ಶಾಸಕನಾಗಿ ಬೋಪಯ್ಯ ತನ್ನ ಕ್ಷೇತ್ರದ ಜನರ ರಕ್ಷಣೆಯನ್ನು ಗಡಿ ಬಂದ್ ಮೂಲಕ ಮಾಡಿದ್ದಾರೆ. ಗಡಿ ಬಂದ್ ತೆರವು ಮಾಡುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿರುವ  ಕಾಸರಗೋಡು ಸಂಸದನಿಗೆ ತನ್ನ ಕ್ಷೇತ್ರದ ಜನ ಎಷ್ಟು ಮುಖ್ಯವೋ ಕರ್ನಾಟಕದ ಮುಖ್ಯಮಂತ್ರಿಗಳಿಗೆ ತನ್ನ ರಾಜ್ಯದ ಜನರೂ ಅಷ್ಟೇ ಮುಖ್ಯ. ಹಾಗೆ ಶಾಸಕ ಬೋಪಯ್ಯ ಅವರಿಗೂ ತನ್ನ  ಕ್ಷೇತ್ರದ ಜನ ಮುಖ್ಯ. ರಾಜ್ಯ ಸರಕಾರವನ್ನು ಮಣಿಸಿ ಬೋಪಯ್ಯ ಗಡಿ ಬಂದ್ ಮಾಡಿದ್ದಾರೆ. ಇದಕ್ಕಾಗಿ ಬೋಪಯ್ಯ ಮತ್ತು ಸುನಿಲ್ ಸುಬ್ರಮಣಿ ಅವರಿಗೆ ಅಭಿನಂದನೆಗಳು ಎಂದರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಕೂಡ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಎಲ್ಲಿಯಾದರೂ ಗಡಿ ರಸ್ತೆ ತೆರೆದಿದ್ದರೆ ಈಗಾಗಲೇ ಪರಿಸ್ಥಿತಿ ,ನಿಯಂತ್ರಣ ತಪ್ಪಿರುವ ಕಣ್ಣೂರು. ಕಾಸರಗೋಡು ಜಿಲ್ಲೆಗಳಿಂದ ಕೊಡಗಿಗೆ ಉಂಟಾಗುತ್ತಿದ್ದ ಅಪಾಯ ಊಹಿಸಲೂ ಕಷ್ಟ ಇತ್ತು. ಕೊಡಗು ಸದ್ಯ  ಸುರಕ್ಷಿತವಾಗಿದೆ. ಅಧಿಕಾರಿಗಳು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಜಿಲ್ಲೆಯ ಜನರ ಸಹಕಾರ ಈವರೆಗೂ ಚೆನ್ನಾಗಿದೆ. ಇನ್ನೂ 14 ದಿನ ಮನೆ ಒಳಗೇ ಇದ್ದು ಸಹಕರಿಸಿ ಎಂದು ಮನವಿ ಮಾಡಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: