ಪ್ರಮುಖ ಸುದ್ದಿ

ಕೊಡಗಿನಲ್ಲಿ  ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು : ಸಚಿವ ವಿ ಸೋಮಣ್ಣ ಮಾಹಿತಿ

ರಾಜ್ಯ(ಮಡಿಕೇರಿ)ಮಾ.31:-   ಕೊಡಗಿನಲ್ಲಿ  ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಮಡಿಕೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಮಾಹಿತಿ  ನೀಡಿದರು.

ಮಡಿಕೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು  ಕೊಡಗಿನಲ್ಲಿ ಆರೋಗ್ಯ ಸ್ಥಿತಿ ಯೋಗ್ಯವಾಗಿದೆ. ಯಾವುದೇ ಆತಂಕ ಇಲ್ಲ. ಎಲ್ಲವೂ ನಿಯಂತ್ರಣದಲ್ಲಿ ಇದೆ. ಜನರ ಅನುಕೂಲಕ್ಕೆ ತಕ್ಕಂತೆ ಕರ್ಫ್ಯೂ ಸಡಿಲಿಕೆಯಿದ್ದು,  ದಿನದಲ್ಲಿ  ಕೊಡಗು  ಜಿಲ್ಲೆಯಲ್ಲಿ ಮೀನು ಹೊರತು ಪಡಿಸಿ ಉಳಿದ ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು. ಕಾಫೀ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು.  ಗಡಿ ರಾಜ್ಯಕ್ಕೆ   ಕಾಫಿ. ಕರಿಮೆಣಸು ಕೊಂಡೊಯ್ಯಲು ಅನುಮತಿ ನೀಡಲಾಗುವುದು. ವಾರದ ಎಲ್ಲಾ ದಿನದಲ್ಲಿ  ಬೆಳಗ್ಗೆ 6ರಿಂದ 8ರವರೆಗೆ ಹಾಲು, ಪತ್ರಿಕೆ ವಿತರಣೆಗೆ ಅವಕಾಶ ಕಲ್ಪಿಸಲಾಗುವುದು. ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಿಗ್ಗೆ 6 ರಿಂದ ಮಧ್ಯಾನ್ಹ  12 ಗಂಟೆಯವರೆಗೆ ದಿನಸಿ ಮತ್ತು ತರಕಾರಿ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಮನೆಯಲ್ಲಿ ಕಾಫಿ ಶೇಖರಿಸಿಟ್ಟ ಬೆಳಗಾರರಿಗೆ ಕಾಫಿ ಮಾರಲು ಅನುಕೂಲ ಕಲ್ಪಿಸಲು ಸರ್ಕಾರ ಮುಂದಾಗಿದೆ ಎಂದರು.

1900ಮಂದಿ ಜಿಲ್ಲೆಯ  ಕೂಲಿ ಕಾರ್ಮಿಕರಿಗೆ ಪಡಿತರ ವ್ಯವಸ್ಥೆ ಮಾಡಲಾಗಿದೆ.  10 ವೆಂಟಿಲೇಟರ್ ಜಿಲ್ಲಾಸ್ಪತ್ರೆಗೆ ವ್ಯವಸ್ಥೆ ಮಾಡಲಾಗುತ್ತದೆ. ತರಕಾರಿ ಗ್ರಾಮ ಮಟ್ಟದಲ್ಲಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು.  ಕಾಫೀ ಮಾರಾಟ,  ಗೊಬ್ಬರ ಖರೀದಿ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು. ಕಾಫೀ ಗ್ರೋವರ್ಸ್ ಸೊಸೈಟಿ ಗೆ ಡಿಸಿಸಿ ಬ್ಯಾಂಕ್ ಮೂಲಕ 1 ಕೋಟಿ ಸಹಾಯ ಧನ ನೀಡಲಾಗುತ್ತಿದ್ದು, ಅವರಿಂದ ಕಾಫೀ ಕೊಳ್ಳುವಿಕೆ ನಡೆಯಲಿದೆ.  ಅರೇಬಿಕಾ 5000. ರೊಬಸ್ಟಾ  3000 ದರದಲ್ಲಿ ಖರೀದಿ. ಶಿಕ್ಷಣ ಇಲಾಖೆ ಮೂಲಕ 21 ದಿನಗಳ  ಕಾಲ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೂಲಕ  ಮಕ್ಕಳಿಗೆ ಬಿಸಿ ಊಟ ವಿತರಣೆಗೆ  ತಲಾ 2 ಕೆಜಿ. ಅಕ್ಕಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾಡಳಿತ ಅತ್ಯುತ್ತಮ ಮಟ್ಟದಲ್ಲಿ ಸೋಂಕು ವಿರುದ್ಧ ಕ್ರಮ ಕೈ ಕೊಂಡಿದೆ. ಅಂತರ ರಾಜ್ಯ ಗಡಿ ಬಂದ್ ಸಮರ್ಥನೀಯ. ಹಾಸನ  ಜಿಲ್ಲಾ ಗಡಿ  ಬಂದ್ ಆಗಿದೆ. ಜನರ ಸಹಕಾರ ಅತ್ಯಗತ್ಯ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ, ಕೊಡಗು ಜಿಲ್ಲೆಯ ಶಾಸಕರಾದ ಕೆ ಜಿ ಬೋಪಯ್ಯ  ಅಪ್ಪಚ್ಚು ರಂಜನ್. ಸುನಿಲ್ ಸುಬ್ರಮಣಿ. ವೀಣಾ ಅಚ್ಚಯ್ಯ. ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೆ ಜಿ ಹರೀಶ್. ಉಪಾಧ್ಯಕ್ಷ ರಾದ ಲೋಕೇಶ್ವರಿ ಗೋಪಾಲ್  ,ಕೊಡಗು  ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜೋಯ್. ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ್ . ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿ ಪ್ರಿಯ ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: