ಪ್ರಮುಖ ಸುದ್ದಿಮೈಸೂರು

ಕೊರೋನಾ ಮಹಾಮಾರಿ ; ಆಸ್ಪತ್ರೆಗಳಲ್ಲಿ ವೈದ್ಯರ ಅಭಾವ ಹಿನ್ನೆಲೆ : ಮತ್ತೆ  ಸ್ಟೆಥೋಸ್ಕೋಪ್  ಹಿಡಿಯಲು ಸಿದ್ಧ ಎಂದಿದ್ದಾರಂತೆ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು/ಬೆಂಗಳೂರು,ಮಾ.31:-  ಕೊರೋನಾ ಮಹಾಮಾರಿ ಕರ್ನಾಟಕ ರಾಜ್ಯವನ್ನೇ ಅಲುಗಾಡಿಸುತ್ತಿದ್ದು ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೆ ಇದೆ.   ಆಸ್ಪತ್ರೆಗಳಲ್ಲಿ ವೈದ್ಯರ ಅಭಾವ ಸಹ ಕಾಣಿಸಿಕೊಳ್ಳುತ್ತಿದ್ದು ಈ ಹಿನ್ನೆಲೆಯಲ್ಲಿ  ಮೈಸೂರು ವರುಣ ವಿಧಾನಸಭಾ ಕ್ಷೇತ್ರದ   ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ  ಮತ್ತೆ  ಸ್ಟೆಥೋಸ್ಕೋಪ್  ಹಿಡಿಯಲು ಸಿದ್ಧ ಎಂದಿದ್ದಾರಂತೆ.

ಭಾರತದಲ್ಲಿ ಕೊರೋನಾ ಮೂರನೇ ಹಂತಕ್ಕೆ ತಲುಪುವ ಸಾಧ್ಯತೆಗಳು ಹೆಚ್ಚಾಗಿದ್ದರಿಂದ ಕಾಂಗ್ರೆಸ್ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ  ಇದೀಗ ವೈದ್ಯಕೀಯ ಸೇವೆ ಸಲ್ಲಿಸಲು ಮುಂದಾಗಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯನವರ ಪುತ್ರರಾಗಿರುವ ಇವರು  ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದಾರೆ. “ಅಗತ್ಯವಿದ್ದರೆ, ನಾನು ವೈದ್ಯನಾಗಿ ಸೇವೆ ಸಲ್ಲಿಸಲು ಸಿದ್ಧನಿದ್ದೇನೆ” ಎಂದಿದ್ದಾರಂತೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: