ಪ್ರಮುಖ ಸುದ್ದಿ

ಕೊರೋನಾ :  ಪಿಎಂ ಕೇರ್ಸ್ ನಿಧಿಗೆ  25 ಸಾವಿರ ರೂಪಾಯಿ ದೇಣಿಗೆ ನೀಡಿದ ಪ್ರಧಾನಿ ಮೋದಿ  ತಾಯಿ ಹೀರಾಬೆನ್  

ದೇಶ(ನವದೆಹಲಿ),ಮಾ.31:-  ಹೆಚ್ಚುತ್ತಿರುವ ಕೊರೋನಾ ವೈರಸ್   ಸೋಂಕಿನಿಂದ ಇಡೀ ಜಗತ್ತು ಸಂಕಷ್ಟಕ್ಕೆ ಸಿಲುಕಿದೆ. ಭಾರತದಲ್ಲಿ ಪಾಸಿಟಿವ್ ರೋಗಿಗಳ ಸಂಖ್ಯೆಯೂ ನಿರಂತರವಾಗಿ ಹೆಚ್ಚುತ್ತಿದೆ. ಏತನ್ಮಧ್ಯೆ  ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಜನರು ಪಿಎಂ ಕೇರ್ಸ್ ಗೆ  ನಿರಂತರವಾಗಿ ದೇಣಿಗೆ ನೀಡುತ್ತಿದ್ದಾರೆ. ಪ್ರಧಾನಿ ಮೋದಿಯವರ ತಾಯಿ ಹೀರಾಬೆನ್ ಕೂಡ ತಮ್ಮ ವೈಯುಕ್ತಿಕ ಖಾತೆಯಿಂದ 25 ಸಾವಿರ ರೂಪಾಯಿಗಳನ್ನು ಈ ನಿಧಿಗೆ ದೇಣಿಗೆ ನೀಡಿದ್ದಾರೆ.

ಕೊರೋನಾ ವಿರುದ್ಧದ ಸಮರಕ್ಕೆ, ಹಲವಾರು ಕಾರ್ಖಾನೆಗಳ ಮಾಲೀಕರು ದೇಣಿಗೆ ನೀಡಿದರು.   ಟಾಟಾ ಮತ್ತು ಅದಾನಿ ಗ್ರೂಪ್ ಪಿಎಂ-ಕೇರ್ಸ್ ನಿಧಿಗೆ ದೊಡ್ಡ ಮೊತ್ತದ ಹಣವನ್ನು ನೀಡಿದೆ.   ಭಾರ್ತಿ ಎಂಟರ್‌ಪ್ರೈಸಸ್   100 ಕೋಟಿ ರೂ.   ಜಿಂದಾಲ್ ಪವರ್ ಮತ್ತು ಸ್ಟೀಲ್ ಪಿಎಂ ಕೇರ್ಸ್  ಫಂಡ್‌ಗೆ 25 ಕೋಟಿ ರೂ ನೀಡಿದೆ. (ಏಜೆನ್ಸಿಸ್,ಎಸ್.ಎಚ್)

Leave a Reply

comments

Related Articles

error: