ಕ್ರೀಡೆಪ್ರಮುಖ ಸುದ್ದಿ

ಲಂಕಾಷೈರ್ ಕ್ಲಬ್ ಅಧ್ಯಕ್ಷ ಡೇವಿಡ್ ಹಾಡ್ಕಿಸ್ ಕೋವಿಡ್ -19  ಸೋಂಕಿನಿಂದ ನಿಧನ

ದೇಶ(ನವದೆಹಲಿ)ಮಾ.31:- ಲಂಕಾಷೈರ್ ಕೌಂಟಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಡೇವಿಡ್ ಹಾಡ್ಕಿಸ್ ಅಪಾಯಕಾರಿ ಕೊರೋನಾ ವೈರಸ್ ಸೋಂಕಿಗೆ ಒಳಗಾಗಿ ನಿಧನರಾಗಿದ್ದಾರೆ.

. ಅವರಿಗೆ 71 ವರ್ಷ ವಯಸ್ಸಾಗಿತ್ತು.  ಲಂಕಾಷೈರ್ ತನ್ನ ಅಧಿಕೃತ ಹೇಳಿಕೆಯಲ್ಲಿ ಅವರ ಸಾವಿಗೆ ಕಾರಣವನ್ನು ನೀಡದಿದ್ದರೂ, ಕ್ಲಬ್ ವಕ್ತಾರರು ಮಾಧ್ಯಮ ಸಂಘಕ್ಕೆ ತಿಳಿಸಿದ್ದು, ಅವರ ಸಾವು ಕೊರೋನಾ ವೈರಸ್‌ ನಿಂದಾಗಿದೆ ಎಂದಿದ್ದಾರೆ.

“ಕುಟುಂಬದ ಘೋಷಣೆಯ ನಂತರ ದುಃಖದಿಂದಲೇ  ಕ್ಲಬ್  ಅಧ್ಯಕ್ಷ ಡೇವಿಡ್ ಹೊಡ್ಕಿಸ್ ನಿಧನರಾಗಿದ್ದಾರೆಂಬುದನ್ನು ತಿಳಿಸುತ್ತಿದೆ.   ಎಂದು ಕ್ಲಬ್ ಹೇಳಿಕೆಯೊಂದರಲ್ಲಿ ತಿಳಿಸಿದೆ. ವರದಿಗಳ ಪ್ರಕಾರ, ಈ ಹಿಂದೆ ಅವರು ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ.  ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಕೊಲೀನ್ ಗ್ರೇವ್ಸ್ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. (ಏಜೆನ್ಸಿಸ್,ಎಸ್.ಎಚ್)

Leave a Reply

comments

Related Articles

error: