ಮೈಸೂರು

ಕೂಲಿಕಾರ್ಮಿಕರ ಹಸಿವು ನೀಗಿಸಲು ಮುಂದಾದ ಆರ್ಯ ವೈಶ್ಯ ಸಮಾಜ ಹಾಗೂ ಕಂದಾಯ ಇಲಾಖೆ

ಮೈಸೂರು,ಏ.1:-  ತಿ.ನರಸೀಪುರ ತಾಲೂಕು ಸೋಸಲೆ ಹೋಬಳಿ ಕೆಬ್ಬೆಹುಂಡಿ ಗ್ರಾಮದಲ್ಲಿ ರಾಜ್ಯದ ಬಿಜಾಪುರ ಹಾಗೂ ನೆರೆ ರಾಜ್ಯ ಮಹಾರಾಷ್ಟ್ರ ಮೂಲದ 55 ಕೂಲಿ ಕಾರ್ಮಿಕರು ತಮ್ಮ ಮಕ್ಕಳೊಂದಿಗೆ ಬಣ್ಣಾರಿ ಅಮ್ಮ ನ್ ಕಾರ್ಖಾನೆಯ ಮುಖಾಂತರ ಕಬ್ಬು ಕಟಾವಿಗೆ ಬಂದಿದ್ದು ತಮ್ಮ ತವರಿಗೆ ಮರಳಲಾಗದೆ ಗ್ರಾಮದಲ್ಲೇ ನಿರಾಶ್ರಿತರಾಗಿ ಉಳಿದುಕೊಂಡಿದ್ದಾರೆ. ಕೂಲಿ ಕಾರ್ಮಿಕರ ಹಸಿವು ನೀಗಿಸಲು ಆರ್ಯ ವೈಶ್ಯ ಸಮಾಜ ಹಾಗೂ ಕಂದಾಯ ಇಲಾಖೆ ಮುಂದಾಗಿದೆ.

ಅವರ ನೆರವಿಗೆ ಗ್ರಾಮದ ಮುಖ್ಯಸ್ಥರು ಧಾವಿಸಿ ಸೋಸಲೆ ಹೋಬಳಿ ರಾಜಸ್ವ ನಿರೀಕ್ಷಕ ಮಹದೇವನಾಯಕ್ ಅವರಿಗೆ ವಸ್ತು ಸ್ಥಿತಿಯನ್ನು ವಿವರಿಸಿದ್ದು ತಕ್ಷಣವೇ ಕಾರ್ಯ ಪ್ರವೃತ್ತರಾದ ಅವರು ಟಿ.ನರಸೀಪುರ ತಹಶೀಲ್ದಾರ್ ಅವರ ಗಮನಕ್ಕೆ ತಂದು ಅವರ ಸಲಹೆ ಸೂಚನೆಯಂತೆ ಪಟ್ಟಣದ ಆರ್ಯ ವೈಶ್ಯ ಸಮಾಜದ ವಾಸವಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀನಿವಾಸ್ ಅವರನ್ನು ಭೇಟಿ ಮಾಡಿ ನಿರಾಶ್ರಿತರ ಸ್ಥಳ ಪರಿಶೀಲಿಸಿ 30 ಸಾವಿರ ರೂ.ಗಳ ದಿನಸಿಯನ್ನು ಟ್ರಸ್ಟ್ ನ ವತಿಯಿಂದ ನೀಡಿ ಮಾನವೀಯತೆ ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ಆನಂದ್, ಶ್ರೀಧರ್,ವಿಕಾಸ್, ಸುಹಾಸ್,ಮುರಳೀಧರ್, ಪ್ರಸಾದ್, ರಾಜಣ್ಣ,ಶಿವರಾಂ,ಶಿವಕುಮಾರ್, ಮಹೇಶ್,ಸುರೇಶ್ ಇತರರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: