ಮೈಸೂರು

ಸಹಸ್ರಾರು ನಿರಾಶ್ರಿತರಿಗೆ ರಾಜ್ಯ ಬಿಜೆಪಿ ಯುವ ಮೋರ್ಚಾ ವತಿಯಿಂದ ಊಟ ವಿತರಣೆ

ಮೈಸೂರು,ಏ.1:- ಮೈಸೂರು ಜಿಲ್ಲೆಯಲ್ಲಿ  ಲಾಕ್ ಡೌನ್ ಘೋಷಣೆಯಾಗಿ ಸಾವಿರಾರು ಜನರು ನಿರಾಶ್ರಿತರಾಗಿದ್ದರಿಂದ ನಂಜರಾಜ ಬಹದ್ದೂರ್ ಛತ್ರದಲ್ಲಿ ವಾಸ್ತವ್ಯ ಹೂಡಿರುವ ನಿರಾಶ್ರಿತರಿಗೆ ನಿನ್ನೆ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ  ಬಳಗದ ವತಿಯಿಂದ ಮೈಮುಲ್ ನಿರ್ದೇಶಕ ಎಸ್.ಸಿ.ಅಶೋಕ್ ನೇತೃತ್ವದಲ್ಲಿ  ನಿನ್ನೆ  ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ವಿತರಿಸಲಾಯಿತು.

ನಂಜರಾಜ ಬಹದ್ದೂರ್ ಛತ್ರವಲ್ಲದೆ ನ್ಯಾಯಾಲಯ ಎದುರಿನ ಆವರಣ,ಕರ್ತವ್ಯ ನಿರತ ಪೊಲೀಸರಿಗೂ ಆಹಾರದ ಪೊಟ್ಡಣ,ಕುಡಿಯುವ ನೀರು, ಮಾಸ್ಕ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಳಗದ ಮುಖಂಡರಾದ ಎಲ್ ಆರ್ .ಮಹದೇವ ಸ್ವಾಮಿ .  ಲಕ್ಷ್ಮೀದೇವಿ, ಆನಂದ್,ನಿಖಿಲ್.ಜಸ್ವಂತ್ .ನಂದೀಶ್ ಕೆ.ಎಸ್  ಮೊದಲಾದವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: