ಮೈಸೂರು

ಪಾಲಿಕೆ ವ್ಯಾಪ್ತಿಯಲ್ಲಿ ನಾಗರಿಕರ ಮನೆ ಬಾಗಿಲಿಗೆ ಹಣ್ಣು ಹಾಗೂ ತರಕಾರಿ ಪೂರೈಸುವ ಕಾರ್ಯಕ್ರಮಕ್ಕೆ ಚಾಲನೆ

ಮೈಸೂರು,ಏ.1:-  ಕೊರೋನಾ ವೈರಸ್ ಸೋಂಕು ಹರಡುವುದನ್ನು  ತಡೆಯಲು  ಜಿಲ್ಲೆಯಾದ್ಯಂತ ಲಾಕ್‍ಡೌನ್ ಜಾರಿಯಲ್ಲಿದ್ದು, ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಗರಿಕರ ಮನೆ ಬಾಗಿಲಿಗೆ ಹಣ್ಣು ಹಾಗೂ ತರಕಾರಿ ಪೂರೈಸುವ ಕಾರ್ಯಕ್ರಮಕ್ಕೆ ನಿನ್ನೆ   ಚಾಲನೆ ನೀಡಲಾಯಿತು.

ಮೈಸೂರು ಮಹಾನಗರ ಪಾಲಿಕೆ, ತೋಟಗಾರಿಕೆ ಇಲಾಖೆ ಹಾಗೂ ಹಾಪ್‍ಕಾಮ್ಸ್ ಸಂಯುಕ್ತಾಶ್ರಯದಲ್ಲಿ   ಕಾರ್ಯಕ್ರಮ ರೂಪಿಸಲಾಗಿದ್ದು, ಐದು  ವಾಹನಗಳು ಜನರ ಮನೆ ಬಾಗಿಲಿಗೇ  ಹಣ್ಣು-ತರಕಾರಿ ಪೂರೈಸಲಿವೆ.  ಪ್ರತಿ ವಾಹನದಲ್ಲಿ 1.5 ಟನ್ ಹಣ್ಣು-ತರಕಾರಿ ಮಾರಾಟ ಮಾಡಲು ಉದ್ದೇಶಿಸಲಾಗಿದ್ದು,  ಮಾರುಕಟ್ಟೆಯಲ್ಲಿ ಜನದಟ್ಟಣೆ ಕಡಿಮೆಗೊಳಿಸುವಲ್ಲಿಯೂ ಈ ವ್ಯವಸ್ಥೆ ಸಹಕಾರಿಯಾಗಲಿದೆ.  ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದಲ್ಲಿ  ಇನ್ನಷ್ಟು ವಾಹನಗಳನ್ನು ಬಳಸಿಕೊಳ್ಳಲಾಗುವುದು. ಮೈಸೂರು ನಗರದಲ್ಲಿ 45 ಹಾಪ್‍ಕಾಮ್ಸ್‍ನ ಔಟ್‍ಲೆಟ್‍ಗಳಿದ್ದು, ಔಟ್‍ಲೆಟ್ ಇಲ್ಲದ ಪ್ರದೇಶಗಳಲ್ಲಿ ಈ ವಾಹನಗಳು ಸಂಚರಿಸಲಿವೆ   ಎಂದು ಮೈಸೂರು ಹಾಪ್‍ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಹೆಚ್.ಸಿ.ಸುದರ್ಶನ್ ತಿಳಿಸಿದ್ದಾರೆ.

ಮೈಸೂರಿನ ಕರ್ಜನ್ ಪಾರ್ಕ್‍ನಲ್ಲಿರುವ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಆವರಣದಲ್ಲಿ   ಮನೆ ಮನೆ ಬಾಗಿಲಿಗೆ ಹಣ್ಣು ಮತ್ತು ತರಕಾರಿ ಪೂರೈಸುವ ಕಾರ್ಯ ಕ್ರಮಕ್ಕೆ ಮೇಯರ್ ತಸ್ನೀಂ ಚಾಲನೆ ನೀಡಿದರು. ಉಪ ಮೇಯರ್ ಶ್ರೀಧರ್, ತೋಟ ಗಾರಿಕೆ ಇಲಾಖೆ ಉಪ ನಿರ್ದೇಶಕ ರುದ್ರೇಶ್ ಮತ್ತಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: