ದೇಶಪ್ರಮುಖ ಸುದ್ದಿ

ಅಮರೀಂದರ್ ಸಿಂಗ್ ಪಂಜಾಬ್ ಸಿಎಂ ; ಸಿಧುಗೆ ಕ್ಯಾಬಿನೆಟ್ ಸ್ಥಾನ

ಕ್ಯಾಬಿನೆಟ್ ಸಚಿವ ಸ್ಥಾನ ಪಡೆದ ನವಜ್ಯೋತ್ ಸಿಂಗ್ ಸಿಧು.

ಚಂಡೀಗಡ : ಪಂಜಾಬ್‍ ಮುಖ್ಯಮಂತ್ರಿಯಾಗಿ ಕ್ಯಾಪ್ಟನ್ ಅಮರೀಮಂದರ್‍ ಸಿಂಗ್‍ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಿ.ಪಿ.ಸಿಂಗ್‍ ಬದ್ನೋರ್‍ ಅವರು ಪ್ರಮಾಣವಚನ ಬೋಧಿಸಿದರು.

ಚುನಾವಣೆಯಲ್ಲಿ ಪಂಜಾಬ್ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ ಕ್ಯಾಪ್ಟನ್ ಅಮರೀಂದರ್ ಸಿಂಗ್‍ ಅವರಿಗೆ 2 ಬಾರಿಗೆ ಮುಖ್ಯಮಂತ್ರಿ ಸ್ಥಾನ ಒದಗಿಬಂದಿದೆ.

ಪ್ರಮಾಣ ವಚನ ಸಮಾರಂಭದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಹಾಜರಿದ್ದರು. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ನೀಡಲಾಗಿದೆ. ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ಸೋದರ ಮನ್‍ಪ್ರೀತ್ ಬಾದಲ್, ಸಾಧು ಸಿಂಗ್ ಧರ್ಮಸೋತ್, ಬ್ರಹ್ಮ್ ಮೋಹೀಂದ್ರ, ಅರುಣಾ ಚೌಧರಿ ಅವರು ಕ್ಯಾಪ್ಟನ್ ಸಂಪುಟದಲ್ಲಿರುವ ಪ್ರಮುಖರು.

(ಎನ್‍.ಬಿ.ಎನ್‍)

Leave a Reply

comments

Related Articles

error: