ಮೈಸೂರು

ಕುರಿ ಕದ್ದು ಪರಾರಿ :ಸ್ಕೂಟರ್ ನಲ್ಲಿ ಬಂದ ಯುವಕರ ಕೃತ್ಯ

ಮೈಸೂರು,ಏ.1:- ಎಲ್ಲರೂ ಕೊರೋನಾ ವೈರಸ್ ಭೀತಿಯಲ್ಲಿದ್ದರೆ ಕಳ್ಳರು ಮಾತ್ರ ತಮ್ಮ ಕೈಚಳಕ ತೋರಿಸುತ್ತಲೇ ಇದ್ದಾರೆ. ಬೋಗಾದಿ ಬ್ಯಾಂಕ್ ಕಾಲನಿಯ ರೈತ ಸಿದ್ದೇಗೌಡ ಅವರ ತೋಟದ ಮನೆಯಿಂದ ಕುರಿಕದ್ದು ಪರಾರಿಯಾದ ಘಟನೆ ನಡೆದಿದೆ.

ಕೊರೋನಾ ವೈರಸ್ ಹರಡುವುದನ್ನು ತಡೆಯಲು ಜಿಲ್ಲೆಯಾದ್ಯಂತ ಲಾಕ್ ಡೌನ್ ಘೋಷಣೆಯಾಗಿದ್ದು ಮಾಂಸದಂಗಡಿಗಳು ಕೂಡ ಬಂದ್ ಆಗಿತ್ತು. ಆದರೆ ಕಳೆದ ಶುಕ್ರವಾರ ಮತ್ತು ಭಾನುವಾರ ಮಾಂಸ ಮಾರಾಟಕ್ಕೆ  ಯಾವುದೇ ಅಡ್ಡಿ ಮಾಡಿರಲಿಲ್ಲ. ಹೀಗಾಗಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದ್ದು, ಕುರಿ, ಮೇಕೆಗಳ ಪೂರೈಕೆ ಕಡಿಮೆಯಾಗಿತ್ತು. ಅದರಿಂದ ಮುಖಕ್ಕೆ ಮಾಸ್ಕ್ ಧರಿಸಿ ರಾತ್ರಿ ವೇಳೆ ಬಂದ ಯುವಕರಿಬ್ಬರು ಮನೆ ಬಳಿ ಕಟ್ಟಿ ಹಾಕಿದ್ದ ಕುರಿಯನ್ನು ಕದ್ದು ಸ್ಕೂಟರ್ ನಲ್ಲಿ ಪರಾರಿಯಾಗಿದ್ದಾರೆ.

ಈ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು, ಸರಸ್ವತಿಪುರಂ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: