ಮೈಸೂರು

ಕಡಕೊಳದಲ್ಲಿರುವ  ಕಾರ್ಖಾನೆ ಲಾಕ್ ಡೌನ್ ಹಿನ್ನೆಲೆ : ವೀಕ್ಷಿಸಿದ ಸಚಿವ ವಿ.ಸೋಮಣ್ಣ

ಮೈಸೂರು,ಏ.1:- ಕೋವಿಡ್-19 ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಕಡಕೊಳದಲ್ಲಿರುವ  ಜ್ಯುಬಿಲಿಯಂಟ್ ಕಾರ್ಖಾನೆ ಲಾಕ್ ಡೌನ್ ಆಗಿರುವುದನ್ನು ಇಂದು ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು  ವೀಕ್ಷಿಸಿದರು.

ಕಾರ್ಖಾನೆಯಲ್ಲಿ 15 ಜನ ಸೆಕ್ಯೂರಿಟಿ ಗಾರ್ಡ್ ಗಳು ಮಾತ್ರ ಇದ್ದು ಅವರನ್ನು ಅಲ್ಲೇ ಕ್ವಾರೆಂಟೈನ್ ಮಾಡಲಾಗಿದೆ ಎಂಬುದು ಆ ವೇಳೆ ತಿಳಿದು ಬಂತು. ಅವರಿಗೆ ಬೇಕಾದ ಊಟ ಹಾಗೂ ಅಗತ್ಯ ವಸ್ತುಗಳನ್ನು ಇಲ್ಲಿಗೇ ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್  ಹಾಗೂ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್  ಮಾಹಿತಿ ನೀಡಿದರು.

ಈ ಕಾರ್ಖಾನೆಯ 9ಮಂದಿ ಕಾರ್ಮಿಕರಿಗೆ ಈಗಾಗಲೇ ಕೊರೋನಾ ವೈರಸ್ ಸೋಂಕು ದೃಢಪಟ್ಟಿದ್ದು, ಕೊವೀಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾವಿರಕ್ಕೂ ಅಧಿಕ ಮಂದಿ ಕಾರ್ಮಿಕರಿದ್ದು, ಅವರನ್ನು ಕ್ವಾರೆಂಟೈನ್ ನಲ್ಲಿರಿಸಲಾಗಿದೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: