ಮೈಸೂರು

ಮೈಸೂರು ರಕ್ಷಣಾ ವೇದಿಕೆ,ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಿಂದ ಕೂಲಿ ಕಾರ್ಮಿರಿಗೆ ಅನ್ನ ದಾನ

ಮೈಸೂರು,ಏ.1:- ಮೈಸೂರು ರಕ್ಷಣಾ ವೇದಿಕೆ ಮತ್ತು ರಾಜಕೀಯ ರವಿ,ಹೇಮಾ ಸಂತೋಷ್ ಅವರ ಸಹಭಾಗಿತ್ವದಲ್ಲಿಂದು ಕೂಲಿ ಕಾರ್ಮಿರಿಗೆ ಅನ್ನ ದಾನ ಮಾಡಲಾಯಿತು.

ಕೊರೋನಾ ವೈರಸ್ ಹಿನ್ನೆಲೆಯಲ್ಲಿ  ಇಡೀ ಭಾರತ ಸ್ತಬ್ಧವಾಗಿದೆ.  ಲಾಕ್ ಡೌನ್ ಮಾಡಿರುವುದರಿಂದ ದಿನನಿತ್ಯದ ಜೀವನಕ್ಕೆ ಆ ದಿನವೇ ದುಡಿದು ಆ ದಿನವೇ ಜಿವನ ಮಾಡುವ ಕೂಲಿ ಕಾರ್ಮಿಕರ ಜೀವನ ದುಸ್ಥಿತಿಯಲ್ಲಿದೆ .ಹಾಗಾಗಿ ದಾನಿಗಳಾದ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನ ನಿರ್ದೇಶಕ ರಾಜಕೀಯ ರವಿ ಮತ್ತು ಹೇಮಾ ಸಂತೋಷ್ ಮತ್ತು ಮೈಸೂರು ರಕ್ಷಣಾ ವೇದಿಕೆ ಸಹಭಾಗಿತ್ವದಲ್ಲಿ  ಕೆ.ಆರ್. ಆಸ್ಪತ್ರೆಯ ಮುಂಭಾಗ ಕೂಲಿಕಾರ್ಮಿಕರಿಗೆ ಅನ್ನದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ದಾನಿಗಳಾದ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ರಾಜಕೀಯ ರವಿ,ಸಮಾಜ ಸೇವಕಿ ಹೇಮಾ ಸಂತೋಷ್, ಮೈಸೂರು ರಕ್ಷಣಾ ವೇದಿಕೆಯ ಉಪಾಧ್ಯಕ್ಷ ಕುಮಾರ್ ಗೌಡ  ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: