ಮೈಸೂರು

ವಾರ್ಡ್ ನಂಬರ್ 23 ರ ಪೌರ ಕಾರ್ಮಿಕರಿಗೆ ಸ್ಯಾನಿಟೈಸರ್ ಇನ್ನಿತರ ವಸ್ತು ವಿತರಣೆ

ಮೈಸೂರು,ಏ.1:- ಪಿಜಿ ಜನಸ್ಪಂದನ ಫೌಂಡೇಷನ್ ವತಿಯಿಂದ ವಾರ್ಡ್ ನಂಬರ್ 23 ರ ಪೌರ ಕಾರ್ಮಿಕರಿಗೆ ಸ್ಯಾನಿಟೈಸರ್, ಡೆಟಾಲ್ ಸೋಪ್ ,ನ್ಯಾಪ್ಕಿನ್, ಕುಡಿಯುವ ನೀರಿನ ಬಾಟಲ್ ಕೊಡುವ ಮೂಲಕ  ಪುರಭವನದ ಬಳಿ ಮಾಜಿ ಶಾಸಕರಾದ ವಾಸು ಇಂದು ಚಾಲನೆ ನೀಡಿದರು.

ಪೌರಕಾರ್ಮಿಕರಿಗೆ ಪ್ರತಿದಿನ ಬೆಳಿಗ್ಗೆ 6.30 ಕ್ಕೆ ಕುಡಿಯಲು ಚಹಾ ಹಾಗೂ ಸ್ವಚ್ಛ ನೀರನ್ನು  ನೀಡಲು ಟ್ರಸ್ಟ್ ಅಧ್ಯಕ್ಷ ಮಾಜಿ ನಗರಪಾಲಿಕೆ ಸದಸ್ಯ ಪಿ ಪ್ರಶಾಂತ್ ಗೌಡ ತಿಳಿಸಿದರು.  ಇವರೊಡನೆ ಟ್ರಸ್ಟಿನ ನಿರ್ದೇಶಕ ಗುರುಪ್ರಸಾದ್ ಸ್ಕಂದ ಹಾಗೂ ವಾರ್ಡ್  ಮುಖಂಡರು ಮಹದೇವ್, ರಾಮಪ್ರಸಾದ್,  ಮಂಜು, ಗುರುರಾಜ್ ಶೆಟ್ಟಿ , ಚೆಲುವಣ್ಣ, ರವಿ ,ಯಶವಂತ್, ಉದ್ಯಮಿಗಳಾದ ನೌಕರ ಪ್ರವೀಣ್ , ವಕ್ತಾ ರಾಮ್ , ರಾಜೇಶ್, ಸಜರಾಮ ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: