ಮೈಸೂರು

ಕೊರೋನಾ ವೈರಸ್  ಸೋಂಕು ನಿವಾರಣೆಗಾಗಿ ಮೃತ್ಯುಂಜಯ ಹೋಮ

ಮೈಸೂರು,ಏ.1:- ಲೋಕಕಲ್ಯಾಣಕ್ಕಾಗಿ  ರಾಮಾನುಜ ಮುಖ್ಯ  ರಸ್ತೆಯಲ್ಲಿರುವ   ಕಾಶಿ ವಿಶ್ವನಾಥ ದೇವಸ್ಥಾನದಲ್ಲಿಂದು ಮೃತ್ಯುಂಜಯ ಹೋಮವನ್ನು ನಡೆಸಲಾಯಿತು.

ಬ್ರಾಹ್ಮಣ ಪರಸ್ಪರ ಸಹಾಯ ವೇದಿಕೆಯ ವತಿಯಿಂದ  ಇಂದು  ಕೊರೋನಾ ವೈರಸ್  ಸೋಂಕು ನಿವಾರಣೆಗಾಗಿ ,  ಮೃತ್ಯುವಿನಿಂದ ಸಮಸ್ತ ದೇಶದ ಜನರ ರಕ್ಷಣೆಗಾಗಿ ಅರಮನೆ ಪುರೋಹಿತರಾದ ಕುಮಾರ್ , ಶಂಕರ ನಾರಾಯಣ , ವಿದ್ವಾನ್ ಚಂದ್ರ ಶೇಖರ ಶಾಸ್ತ್ರಿ ಗಳು  ಇವರ   ಅಧ್ವೈರ್ಯದಲ್ಲಿ  ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ   ಅಭಿಷೇಕ , ನವಗ್ರಹ ಶಾಂತಿ ಹಾಗೂ ಮೃತ್ಯುಂಜಯ ಹೋಮವನ್ನು  ಶಾಸಕರಾದ ಎಸ್ ಎ ರಾಮದಾಸ್ ಅವರ ಹಾಗೂ ನಗರ ಪಾಲಿಕೆ ಸದಸ್ಯರಾದ ಬಿ.ವಿ ಮಂಜುನಾಥ್ ಅವರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿತ್ತು.

ವಿಶೇಷವಾಗಿ ಈ ಹೋಮದಲ್ಲಿ  ಕೊರೋನಾ ವೈರಸ್  ವಿರುದ್ಧ ಹೋರಾಡುತ್ತಿರುವ ವೈದ್ಯರು , ಶುಶ್ರೂಷಕರು, ಪೋಲೀಸ್ ಸಿಬ್ಬಂದಿಗಳು,    ಪೌರ ಕಾರ್ಮಿಕರು, ಸರ್ಕಾರಿ ಸಿಬ್ಬಂದಿ ಹಾಗೂ ದೇಶದ ಎಲ್ಲಾ ಚುನಾಯಿತ ಪ್ರತಿನಿಧಿಗಳಿಗೆ , ವಿಶೇಷವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಶಕ್ತಿ ನೀಡಲು ಪರಮೇಶ್ವರ ನಲ್ಲಿ ಪ್ರಾರ್ಥಿಸಲಾಯಿತು.

ಬ್ರಾಹ್ಮಣ ಪರಸ್ಪರ ಸಹಾಯ ವೇದಿಕೆಯ  ಸುಭಾಷ್ , ಋತ್ವಿಕ್  ಭಾರದ್ವಾಜ್ , ಸುಮುಖ ಭಾರದ್ವಾಜ್ ,ಗುರುರಾಜ್ , ವೆಂಕಟೇಶ್ , ಚಂದ್ರಪ್ರಕಾಶ್ , ಶ್ರೀನಿವಾಸ , ಅಜಯ್, ಬಿಂದು ಮಾಧವ  ಗಣೇಶ್ ಭಾರ್ಗವ ಹಾಗೂ ಸ್ನೇಹಿತರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: