ಮೈಸೂರು

ದಾನಿಗಳು ದಿನಸಿಗಳನ್ನು ಪಾಲಿಕೆಗೆ ನೀಡಿದರೆ ಬಡವರಿಗೆ, ಸ್ಲಂನಲ್ಲಿ ವಾಸಿಸುವ ಜನರ  ಮನೆಗೆ ತಲುಪಿಸಲಾಗುವುದು : ಮೇಯರ್ ತಸ್ನೀಂ

ಮೈಸೂರು,ಏ.1:- ದಯವಿಟ್ಟು ಯಾರೂ ಮನೆಯ ಹೊರಗಡೆ ಬರಬೇಡಿ, ನಿಮಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಮೊಬೈಲ್ ಸರ್ವೀಸ್ ತರ  ಮನೆ ಮನೆಗೆ ತಲುಪಿಸಲಾಗುವುದು, ದಾನಿಗಳು ದಿನಸಿಗಳನ್ನು ಪಾಲಿಕೆಗೆ ನೀಡಿದರೆ ಬಡವರಿಗೆ, ಸ್ಲಂನಲ್ಲಿ ವಾಸಿಸುವ ಜನರ  ಮನೆಗೆ ತಲುಪಿಸಲಾಗುವುದು ಎಂದು ಪಾಲಿಕೆಯ ಮೇಯರ್ ತಸ್ನೀಂ ಮನವಿ ಮಾಡಿದರು.

ಇಂದು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ತೆರೆದ ಜೀಪ್ ನಲ್ಲಿ ತೆರಳಿ ಈ ಕುರಿತು ಜಾಗೃತಿ ಮೂಡಿಸಬೇಕು ಅಂದುಕೊಂಡಿದ್ದೇವೆ. ಸ್ಲಂ ನಲ್ಲಿ ತುಂಬ ಬಡವರು ಇದ್ದಾರೆ. ಅವರಿಗೆ ಹೊರಗಡೆ ಬರಬೇಡಿ ಅಂದರೆ ಅವರು ದಿನಾ ಕೂಲಿ ಮಾಡಿ ಬಂದ ಹಣದಿಂದಲೇ ನಾವು ಏನಾದರೂ ತಿನ್ನಬೇಕು ಅಂತಾರೆ. ನಮ್ಮ ಮೈಸೂರಿನಲ್ಲಿ ಸಾಕಷ್ಟು ದಾನಿಗಳಿದ್ದಾರೆ. ಅವರು ಏನು ದಾನ ಮಾಡಬೇಕು ಅಂದುಕೊಂಡಿದ್ದಾರೋ ಅದನ್ನು ಪಾಲಿಕೆಗೆ ನೀಡಿದರೆ ಸ್ಲಂನವರಿಗೆ, ನಿಜವಾಗಿಯೂ ಸಂಕಷ್ಟದಲ್ಲಿರುವ ಜನರಿಗೆ ನಾವದನ್ನು ತಲುಪಿಸುವ ವ್ಯವಸ್ಥೆ ಮಾಡುತ್ತೇವೆ ಎಂದರು.

ಮಹಾಮಾರಿ ಕೊರೋನಾ ವೈರಸ್ ಭೀತಿ ಯಿಂದ ಸ್ಲಂಗಳಲ್ಲಿ   ಆಹಾರದ  ಸಮಸ್ಯೆ ಉಂಟಾಗಿದೆ. ಸ್ಲಂಗಳಲ್ಲಿ ಆಹಾರಕ್ಕಾಗಿ ಜನರು ಹಾತೊರೆಯುತ್ತಿದ್ದಾರೆ. ಹಾಗಾಗಿ ಸ್ಲಂ ಜನ ಹೊರ ಬರುತ್ತಿದ್ದಾರೆ. ಸ್ಲಂ ಜನರ ಆಹಾರದ ಕೊರತೆ ನೀಗಿಸಲು ದಾನಿಗಳಿಗೆ   ಮೇಯರ್ ತಸ್ಲೀಂ ಮನವಿ ಮಾಡಿದರು. ಈಗಾಗಲೇ ಸಂಘಸಂಸ್ಥೆಗಳು ಮಧ್ಯಾಹ್ನದ ಆಹಾರ ನೀಡುತ್ತಿದ್ದಾರೆ‌‌. ಆದರೆ ಅದೂ ಎಲ್ಲಾ ಸ್ಥಳಗಳಿಗೂ ಸಿಗುತ್ತಿಲ್ಲ. ಆಗಾಗಿ ಸ್ಲಂಗಳಲ್ಲಿ ಆಹಾರದ ಅಭಾವ ಹೆಚ್ಚಾಗಿದೆ . ಅವರ ಹಸಿವು ನೀಗಿಸಲು ದಾನಿಗಳಿಂದ ಆಹಾರ ಸಾಮಗ್ರಿ ಬೇಕಾಗಿದೆ. ದಾನಿಗಳು ನಿಮ್ಮ ಕೈಲಾದಷ್ಟು ದವಸ ಧಾನ್ಯಗಳನ್ನು ನೀಡಿ. ಇಲ್ಲಿ ಹಣಕ್ಕಿಂತ ಆಹಾರ ಧಾನ್ಯಗಳು ಬೇಕಾಗಿದೆ. ಹಣವನ್ನೂ ನೀಡುವುದಾದರೆ ಬೇಡ ಆಹಾರ ಧಾನ್ಯಗಳನ್ನು ನೀಡಿ.‌ ಪಾಲಿಕೆ ಆಹಾರ ಪದಾರ್ಥಗಳನ್ನು ಸ್ಲಂ ಹಾಗೂ ಅವಶ್ಯಕತೆ ಇರುವ ಜನರಿಗೆ ವಿತರಿಸಲಿದೆ ಎಂದರು.

ಪಾಲಿಕೆಯಿಂದ ಎಲ್ಲಾ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕ್ವಾರೆಂಟೈನ್ ನಲ್ಲಿ ಇರುವವರ ಮನೆಗಳ ಸತ್ತಲೂ ಸ್ಪ್ರೇ ಮಾಡಲಾಗುತ್ತಿದೆ. ಪೌರಕಾರ್ಮಿಕರಿಗೂ ಸೂಕ್ತ ತರಬೇತಿ ನೀಡಲಾಗಿದೆ. ಮೈಸೂರಿನ ಎಲ್ಲಾ ಇಂದಿರಾ ಕ್ಯಾಂಟಿನ್ ನಲ್ಲಿ ಉಚಿತ ಆಹಾರ  ದೊರೆಯಲಿದೆ. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಿ. ಮೈಸೂರಿನಲ್ಲಿ ಇರುವ ಬೇಕರಿಗಳು ಬಾಗಿಲುಗಳನ್ನು ಮುಚ್ಚಿದ್ದಾರೆ. ಅವರಿಗೆ ನಾವು ಬಾಗಿಲು ಮುಚ್ಚಲು ಹೇಳಿಲ್ಲ. ಬ್ರೆಡ್ ಹಾಗೂ ಬನ್ ಗಳು ಅವಶ್ಯಕ ಆಹಾರ ಪದಾರ್ಥಗಳಲ್ಲಿ ಒಂದು ಅವುಗಳು ಅವಶ್ಯಕ. ಅವುಗಳ ತಯಾರಿಯಲ್ಲಿ ನೀವು ತೊಡಗಿಕೊಳ್ಳಿ. ಈ ಬಗ್ಗೆ ಪೊಲೀಸ್ ಇಲಾಖೆಗೂ ಮಾಹಿತಿ ನೀಡುತ್ತೇವೆ. ಕಾಫಿ.ಟೀ. ಬಿಟ್ಟು ಉಳಿದೆಲ್ಲಾ ಬೇಕರಿ ಪದಾರ್ಥಗಳನ್ನು ಮಾರಾಟ ಮಾಡಬಹುದು. ಗೊಂದಲ ಇಲ್ಲದೇ ನೀವು ನಿಮ್ಮ ಮಳಿಗೆಗಳನ್ನು ತೆರೆಯಿರಿ ಎಂದರು.

ಉಪಮೇಯರ್ ಶ್ರೀಧರ್ ಮಾತನಾಡಿ ಪಾಲಿಕೆಯ ವಲಯ ಕಛೇರಿಗಳಲ್ಲಿ ಹತ್ತು ಗಂಜಿಕೇಂದ್ರಗಳನ್ನು ತೆರೆದು ಊಟ ನೀಡಲಾಗುತ್ತಿದೆ. ಊಟಕ್ಕಿಂತ ದಿನಸಿ ನೀಡಿದರೆ ಅವರ ಮನೆಯಲ್ಲಿ ಅವರು ಇಟ್ಕೊಂಡು ಮಾಡ್ಕೋತಾರೆ. ಊಟಕ್ಕಿಲ್ಲ ಅಂತ ಅವರು ಇಲ್ಲಿಗೆ ಬರ್ತಿದ್ದಾರೆ. ದಯವಿಟ್ಟು ಮನೆಯಿಂದ ಹೊರಗಡೆ ಬರಬೇಡಿ. ಹೊರಗೆ ಬಂದಷ್ಟೂ ಸಮಸ್ಯೆ ಹೆಚ್ಚಾಗುತ್ತದೆ. ನಿಮಗೆ ಏನು ಬೇಕೋ ಅದನ್ನು ಮೊಬೈಲ್ ಸರ್ವೀಸ್ ತರ  ಮನೆಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ನಿನ್ನೆ ಈ ವ್ಯವಸ್ಥೆಗೆ ಚಾಲನೆ ಸಿಕ್ಕಿದೆ. ಇನ್ನೂ ಏನೇನು ಸೌಲಭ್ಯ ಬೇಕೋ ಎಲ್ಲವನ್ನೂ ಕೊಡುತ್ತೇವೆ ಎಂದರು.

ಪಾಲಿಕೆಯ ಆಯುಕ್ತರಾದ ಗುರುದತ್ ಹೆಗಡೆ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: