ಮೈಸೂರು

ಯಮ ಧರ್ಮರಾಜನ ವೇಷ ಧರಿಸಿದ ವ್ಯಕ್ತಿಯಿಂದ ಕೊರೋನಾ ವೈರಸ್ ಸೋಂಕು ಕುರಿತು ಜಾಗೃತಿ

ಮೈಸೂರು,ಏ.1:- ಮೈಸೂರಿನಲ್ಲಿ  ಯಮ ಧರ್ಮರಾಜನ ವೇಷ ಧರಿಸಿದ ವ್ಯಕ್ತಿಯಿಂದ ಕೊರೋನಾ ವೈರಸ್ ಸೋಂಕು ಕುರಿತು ಜಾಗೃತಿ ಮೂಡಿಸುವ  ಕಾರ್ಯ ನಡೆಯಿತು.ಇಂದು ಮೈಸೂರಿನ ನಂಜುಮಳಿಗೆ ವೃತ್ತದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕೊರೋನಾ ವೈರಸ್ ಭೀತಿ ಹಿನ್ನಲೆ ಲಾಕ್ ಡೌನ್ ಜಾರಿಯಲ್ಲಿದ್ರೂ ಕೇರ್ ಮಾಡದ ಜನ ಬೀದಿಗಿಳಿಯುತ್ತಿದ್ದು, ಪೊಲೀಸರ ನೆರವಿನೊಂದಿಗೆ ಪ್ರಜ್ಞಾವಂತ ನಾಗರೀಕರ ವೇದಿಕೆ ವಿನೂತನವಾಗಿ ಜಾಗೃತಿ ಮೂಡಿಸಿದೆ. ಅನಗತ್ಯವಾಗಿ ಮನೆಯಿಂದ ಹೊರಬಾರದಂತೆ ಜಾಗೃತಿ ಮೂಡಿಸಿದ್ದು, ಸಿದ್ದಾರ್ಥ ನಗರದ ಜೀವನ್ ಯಮವೇಷಧಾರಿಯಾಗಿ ಗಮನ ಸೆಳೆದರು. ಕೊರೋನಾ ವೈರಸ್ ಸೋಂಕು ಮೂರನೇ ಹಂತ  ತಲುಪುತ್ತಿದೆ. ದಯವಿಟ್ಟು ಮನೆಯಿಂದ ಹೊರಗೆ ಬರಬೇಡಿ ಎಂದು ಯಮವೇಷಧಾರಿ ಮನವಿ ಮಾಡಿದರು. ಪೊಲೀಸರು ಪಾಸ್ ಗಳನ್ನು ಪರಿಶೀಲನೆ ಮಾಡಿ  ಬಿಡುತ್ತಿರುವುದು ಕಂಡು ಬಂತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: