ಮೈಸೂರು

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಹಕಾರದೊಂದಿಗೆ ಹಸಿದವರಿಗೆ ಆಹಾರ ವಿತರಿಸಿದ ಮಾಜಿ ಶಾಸಕ ಸೋಮಶೇಖರ್

ಮೈಸೂರು,ಏ.1:- ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಯವರ ಸಹಕಾರದೊಂದಿಗೆ  ಮಾಜಿ ಶಾಸಕರಾದ   ಎಂ ಕೆ ಸೋಮಶೇಖರ್ ಅವರ ನೇತೃತ್ವದ ಜನಸ್ಪಂದನ ಟ್ರಸ್ಟ್ (ರಿ) ವತಿಯಿಂದ ” 9ನೇ ದಿನದ ಆಹಾರ ವಿತರಣೆ” ಯಲ್ಲಿ  ಜೆಪಿನಗರದ ನಾಚನಹಳ್ಳಿ ಪಾಳ್ಯದ ಚಾಮುಂಡೇಶ್ವರಿ ದೇವಸ್ಥಾನದ ಬಳಿ  ಅಶಕ್ತರಿಗೆ,ಕೂಲಿಕಾರ್ಮಿಕರಿಗೆ  ಆಹಾರ ವಿತರಿಸಲಾಯಿತು.

1000ಕ್ಕೂ ಹೆಚ್ಚು ಜನರಿಗೆ ಆಹಾರ,ಮಾಸ್ಕ್,ನೀರು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಚ್ಚಿದಾನಂದ ಆಶ್ರಮದ ಮುಖ್ಯಸ್ಥರಾದ   ಪ್ರಸಾದ್,ಮಾಜಿ ಮಹಾಪೌರರಾದ ನಾರಾಯಣ್,ರೈಲ್ವೆ ಸಹಕಾರ ಬ್ಯಾಂಕ್ ನಿರ್ದೇಶಕರಾದ ಚಂದ್ರಶೇಖರ್,ಬೋವಿ ಜನಾಂಗದ ಮುಖಂಡರಾದ ಪರಮೇಶ್,ರಾಮು,ಮಹೇಂದ್ರ,ರಂಜನ್,ಕೇಬಲ್ ಶೇಖರ್,ಪುನೀತ್,ಸುನೀಲ್,ವಸಂತ್ ಕುಮಾರ್, ಗುಣಶೇಖರ್, ವಿಶ್ವ,ಹರೀಶ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: