ಮೈಸೂರು

ಕ್ವಾರೆಂಟೈನ್ ಮನೆಗಳಲ್ಲಿನ ಕಸ ಪಡೆಯುವ ಪೌರ ಕಾರ್ಮಿಕರಿಗೆ ನೂತನ ಡ್ರೆಸ್

ಮೈಸೂರು,ಏ.1:- ಮಹಾಮಾರಿ ಕೊರೋನಾ ಭೀತಿ ಹಿನ್ನಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ  ಹೆಚ್ಚಿನ ಸಿದ್ಧತೆ ಮಾಡಿಕೊಂಡಿದೆ. ಕ್ವಾರೆಂಟೈನ್ ಮನೆಗಳಲ್ಲಿನ ಕಸ ಪಡೆಯುವ ಪೌರ ಕಾರ್ಮಿಕರಿಗೆ ನೂತನ ಡ್ರೆಸ್ ವಿತರಿಸಿದೆ.

ಕ್ವಾರೆಂಟೈನ್ ಮನೆಗಳಲ್ಲಿನ ಕಸ ಪಡೆಯುವ ಪೌರ ಕಾರ್ಮಿಕರಿಗೆ ನೂತನ ಡ್ರೆಸ್ ಖರೀದಿಸಿದ್ದು, ಕ್ವಾರೆಂಟೈನ್  ಿರುವ ಮನೆಗಳಿಗಾಗಿ ಹೊಸ ಡ್ರೆಸ್ ನೀಡಲಾಗುತ್ತಿದೆ. ಮನೆಗಳಿಲ್ಲಿ ಕಸ ಪಡೆಯಲು ಹಾಗೂ ಮನೆಗಳಿಗೆ ಔಷಧಿ ಸಿಂಪಡಿಸಲು ಈ ಡ್ರೆಸ್ ಬಳಕೆ ಮಾಡಲಾಗುತ್ತಿದೆ. ಮೈಸೂರಿನ ಎಲ್ಲಾ ಜೋನ್ ಗಳಲ್ಲಿ ಇಬ್ಬಿಬ್ಬರಿಗೆ ಈ ಡ್ರೆಸ್ ಬಳಕೆ ಮಾಡಲು ತಿಳಿಸಲಾಗಿದ್ದು, ಸುರಕ್ಷಿತ ಉಡುಪುಗಳನ್ನು ಆಯುಕ್ತರಾದ ಗುರುದತ್ ಹೆಗಡೆ ಪೌರ ಕಾರ್ಮಿಕರಿಗೆ ವಿತರಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: