ಮೈಸೂರು

ಉಳ್ಳವರು, ಸಿರಿವಂತರು ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡುವಂತೆ ಪಾಲಿಕೆ ಸದಸ್ಯ  ಮಾ.ವಿ.ರಾಮಪ್ರಸಾದ್ ಮನವಿ

ಮಹಾಲಕ್ಷ್ಮಿ ಸ್ವೀಟ್ಸ್ ವತಿಯಿಂದ ದವಸ ಧಾನ್ಯ ವಿತರಣೆ

ಮೈಸೂರು,ಏ.1:- ಇಂದು ಮೈಸೂರು ನಗರದ 55 ನೇ ವಾರ್ಡಿನ ಮೇದರಕೇರಿ ಸೇರಿದಂತೆ ಹಲವು ಭಾಗಗಳಲ್ಲಿ ಮೈಸೂರಿನ ಮಹಾಲಕ್ಷ್ಮಿ ಸ್ವೀಟ್ಸ್ ನವರು ಹಾಗೂ ಅದರ ಮಾಲೀಕರಾದ ಉದ್ಯಮಿ ಶಿವಕುಮಾರ್ ಅವರು 500 ಕುಟುಂಬಗಳಿಗೆ ನೀಡಿದ ದವಸ ಧಾನ್ಯವನ್ನು ಮಹಾನಗರ ಪಾಲಿಕೆ ಸದಸ್ಯ ರಾದ ಮಾ. ವಿ. ರಾಮಪ್ರಸಾದ್  ವಿತರಿಸಿದರು.

ಬಳಿಕ ಮಾತನಾಡಿದ ಅವರು ಯಾರೂ ಸಹ ಹೆದರಬೇಡಿ.  ಕೂಲಿ ಕಾರ್ಮಿಕರು, ಆರ್ಥಿಕವಾಗಿ ಹಿಂದುಳಿದವರ ಪರವಾಗಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ನಗರ ಪಾಲಿಕೆ ಹಾಗೂ ಹಲವು ಸಂಘ ಸಂಸ್ಥೆಗಳು ಜನ ಪ್ರತಿನಿಧಿಗಳು ನಿಮ್ಮೊಂದಿಗೆ ಇದ್ದೇವೆ.

ಉಳ್ಳವರು, ಸಿರಿವಂತರು ಈ ಸಮಯದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡುವಂತೆ ಮನವಿ ಮಾಡಿದರು. ನಾಗರೀಕರು ಬೇಜವಾಬ್ದಾರಿ ಯಿಂದ ಹೊರಗಡೆ ಬಂದು ಓಡಾಡುವುದು, ವಾಹನಗಳಲ್ಲಿ ಬೇರೆ ಕಡೆಗಳಿಗೆ ಹೋಗುವುದನ್ನು ನಿಲ್ಲಿಸಬೇಕು. ಜನ ಸಹಕಾರ ನೀಡಿದರೆ ಮಾತ್ರ ಕೋವಿಡ್ 19 ವೈರಾಣುವನ್ನು ತಡೆಯಬಹುದು ಎಂದು ಜನರಲ್ಲಿ ಮನವಿ ಮಾಡಿದರು. ಮಹಾಲಕ್ಷ್ಮಿ ಸ್ವೀಟ್ಸ್ ಮಾಲೀಕರಾದ ಉದ್ಯಮಿ ಶಿವಕುಮಾರ್ ಅವರಿಗೆ ಇದೇ ವೇಳೆ ಧನ್ಯವಾದಗಳನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ಕೆ ಆರ್ ಠಾಣಾ ಇನ್ಸಪೆಕ್ಟರ್   ಶ್ರೀನಿವಾಸ, ಕೆ ಆರ್ ಠಾಣಾ ಸಿಬ್ಬಂದಿ, ಮುಖಂಡರಾದ ಸಿ ಸಂದೀಪ್, ರೇಣು, ವೆಂಕಟೇಶ್, ಪುಟ್ಟಸ್ವಾಮಿ, ರವಿ, ಮೋಹನ್, ಶಿವು, ಅದ್ವೈತ್, ಶಾಮ್ ಸುಂದರ್ ಮತ್ತಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: