ಮೈಸೂರು

ಕೊರೋನಾ ಮುಕ್ತ ಹೋರಾಟಕ್ಕೆ ಪಿ.ಎಂ ಕೇರ್ಸ್ ನಿಧಿಗೆ  2ಲಕ್ಷ ರೂ.ಚೆಕ್ ನೀಡಿದ ಡಿ.ಟಿ.ಪ್ರಕಾಶ್

ಮೈಸೂರು,ಏ.1:- ಕೊರೋನಾ ಮುಕ್ತ ಹೋರಾಟಕ್ಕೆ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ಪ್ರಧಾನಮಂತ್ರಿಗಳ  ಪಿ.ಎಂ ಕೇರ್ಸ್ ನಿಧಿಗೆ  2ಲಕ್ಷ ರೂಪಾಯಿ ಚೆಕ್ ನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರಿಗೆ ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ  ಡಿ.ಟಿ.ಪ್ರಕಾಶ್  ನೀಡಿದರು.

ಬಳಿಕ ಮಾತನಾಡಿದ  ಡಿ.ಟಿ. ಪ್ರಕಾಶ್    ಕೊರೋನಾ ಸೋಂಕು ತಡೆಗಟ್ಟಲು ಪ್ರತಿಯೊಬ್ಬರೂ ಅವರವರ ಮನೆಯಲ್ಲಿರಬೇಕು,   ನಿರ್ಗತಿಕರಿಗೆ ಬಡವರಿಗೆ ಅವಶ್ಯಕವಿರುವವರಿಗೆ ಅನ್ನದಾಸೋಹ ಮತ್ತು ದಿನಸಿ ಪದಾರ್ಥ, ವೈದ್ಯಕೀಯ ನೆರವು ಮನೆಬಾಗಿಲಿಗೆ ತಲುಪಿಸಲಾಗುವುದು, ಪ್ರತಿಯೊಬ್ಬರೂ ಮಾನವೀಯತೆಯ ಸೇವಾಮನೋಭಾವದೊಂದಿಗೆ ತಮ್ಮ ಮನೆಯ ಸುತ್ತಮುತ್ತವಿರುವ ಅಶಕ್ತರಿಗೆ, ಆರೋಗ್ಯ ಮತ್ತು ಆಹಾರ ಸಮಸ್ಯೆ ಬಗೆಹರಿಸಿ ಮಾನಸಿಕ ಧೈರ್ಯ ತುಂಬಲು  ಮುಂದಾಗಬೇಕು. ಬಹುಶಃ  ಮೈಸೂರಿನಲ್ಲಿ 122ವರ್ಷಗಳ ಹಿಂದೆ ಬಂದಂತಹ ಪ್ಲೇಗ್ ಬಿಟ್ಟರೇ ಕೊರೋನಾ ಎಲ್ಲರನ್ನೂ ಭಯಭೀತಿ ಪಡಿಸಿದೆ. ಆರಕ್ಷಕರು ಪೌರಕಾರ್ಮಿಕರು, ವೈದ್ಯರು ನಮ್ಮೆಲ್ಲರನ್ನು ರಕ್ಷಿಸಲು ಅವರ ಪ್ರಾ ಣವನ್ನೆ ಲೆಕ್ಕಿಸದೇ  ಸೇವೆ ಸಲ್ಲಿಸುತ್ತಿದ್ದಾರೆ. ನಾವೆಲ್ಲರೂ ಮುಂದಿನ ಪೀಳಿಗೆಯನ್ನು ಹಾಗೂ ಸಮಾಜವನ್ನು ರಕ್ಷಿಸಲು ಸರ್ಕಾರದ ಆದೇಶದಂತೆ ಮನೆಯಲ್ಲಿಯೇ ಇರೋಣ ಎಂದರು.

ಬಿಜೆಪಿ ಮೈಸೂರು ಪ್ರಭಾರಿ ಮೈವಿ ರವಿಶಂಕರ್, ಬಿಜೆಪಿ ನಗರಾಧ್ಯಕ್ಷರಾದ ಶ್ರೀವತ್ಸ, ಪ್ರಧಾನ ಕಾರ್ಯದರ್ಶಿ ಹೆಚ್.ಜಿ ಗಿರಿಧರ್, ಮಾಜಿ ನಗರ ಪಾಲಿಕೆ ಸದಸ್ಯ ಎಂ.ಡಿ ಪಾರ್ಥಸಾರಥಿ, ಅಪೂರ್ವ ಸುರೇಶ್, ಬ್ರಾಹ್ಮಣ ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕೆಎಂ ನಿಶಾಂತ್, ರಘು,  ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: