ಪ್ರಮುಖ ಸುದ್ದಿ

ಮಡಿಕೇರಿಯ ಸಪ್ತಗಿರಿಎಂಟರ್ ಪ್ರೈಸಸ್ ನಿಂದ ಮಾಸ್ಕ್ ಕೊಡುಗೆ

ರಾಜ್ಯ( ಮಡಿಕೇರಿ) ಏ.2: – ಜಿಲ್ಲಾಡಳಿತ ಮತ್ತು ಪೊಲೀಸ್‍ಇಲಾಖೆಯ ಸಿಬ್ಬಂದಿಗಳ ಬಳಕೆಗಾಗಿ ಮಡಿಕೇರಿಯಲ್ಲಿನ ಸಪ್ತಗಿರಿ ಎಂಟರ್ ಪ್ರೈಸಸ್ ನಿಂದ ಮಾಸ್ಕ್ ಗಳನ್ನು ಕೊಡುಗೆಯಾಗಿ ನೀಡಲಾಯಿತು.
ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಅಂಬೆಕಲ್‍ ಜೀವನ್ ಕುಶಾಲಪ್ಪ ಅವರು ತಮ್ಮ ಸಪ್ತಗಿರಿ ಎಂಟರ್ ಪ್ರೈಸಸ್ ಸಂಸ್ಥೆಯ ಮೂಲಕ ಜಿಲ್ಲಾಧಿಕಾರಿ ಅನೀಸ್‍ ಕಣ್ಮಣಿ ಜಾಯ್‍ ಅವರಿಗೆ ಜಿಲ್ಲಾಡಳಿತದ ಸಿಬ್ಬಂದಿಗಳ ಬಳಕೆಗಾಗಿ 500 ಮತ್ತು ಪೊಲೀಸ್ ಸಿಬ್ಬಂದಿಗಳ ಬಳಕೆಗಾಗಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪನ್ನೇಕರ್‍ ಅವರಿಗೆ 500 ಮಾಸ್ಕ್ ಗಳನ್ನು ನೀಡಿದರು.
ಜೀವನ್‍ ಕೊಡುಗೆಯನ್ನು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಶಿಸಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಕೊಡಗು ನಾಗರಿಕರ ಆರೋಗ್ಯದ ರಕ್ಷಣೆ ನಿಟ್ಟಿನಿಂದ ಹಗಲಿರುಳು ಕಾರ್ಯನಿರ್ವಹಿಸುತ್ತಿದ್ದು ಈ ನಿಟ್ಟಿನಲ್ಲಿ ಅಭಿನಂದನಾಪೂರ್ವಕವಾಗಿ ಈ ಮಾಸ್ಕ್ ಗಳನ್ನು ನೀಡಲಾಯಿತು ಎಂದು ಎ.ಕೆ.ಜೀವನ್ ತಿಳಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: