ಪ್ರಮುಖ ಸುದ್ದಿ

ವಿಚಾರಣಾಧೀನ 11 ಆರೋಪಿಗಳ ಬಿಡುಗಡೆ

ರಾಜ್ಯ( ಮಡಿಕೇರಿ) ಏ.2 :- ವಿವಿಧ ಆರೋಪದಡಿ ಭಾಗಿಯಾಗಿ 7 ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಒಳಗಾಗಿದ್ದ ವಿಚಾರಣಾಧೀನ 11 ಆರೋಪಿಗಳನ್ನು ಮತ್ತು 7 ವರ್ಷದ ಅವಧಿಯವರೆಗೆ ಆರೋಪ ಸಾಬೀತಾಗಿ ಶಿಕ್ಷೆಗೆ ಗುರಿಯಾಗಿದ್ದ ಒಬ್ಬ ಅಪರಾಧಿಯನ್ನು ಪೆರೋಲ್ ಮೇಲೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ತಾತ್ಕಾಲಿಕವಾಗಿ ಜಿಲ್ಲಾ ಕಾರಾಗೃಹದಿಂದ ಬಿಡುಗಡೆ ಮಾಡಲಾಯಿತು.
ಇದೇ ಸಂದರ್ಭ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಆಯ್ಕೆಯಾಗಿರುವ ಅರೆಕಾಲಿಕ ಸ್ವಯಂ ಸೇವಕರು ಕೋವಿಡ್-19 ಸಂಬಂಧ ಜಾಗೃತಿ ಕಾರ್ಯಕ್ರಮಕ್ಕೆ ಇದೇ ಸಂದರ್ಭ ಚಾಲನೆ ನೀಡಲಾಯಿತು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸ, ಸಿವಿಲ್ ನ್ಯಾಯಾಧೀಶರಾದ ವಿಜಯಕುಮಾರ್, ಜೆಎಂಎಫ್‍ಸಿ ನ್ಯಾಯಾಧೀಶರಾದ ಮನು ಇತರರು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: