ಪ್ರಮುಖ ಸುದ್ದಿ

ಲಾಕ್‍ಡೌನ್ ಪರಿಸ್ಥಿತಿಯಲ್ಲಿ ರೈತರಿಗೆ ಮಾರ್ಗಸೂಚಿಗಳು

ರಾಜ್ಯ(ಮಡಿಕೇರಿ) ಏ.2 :- ಲಾಕ್ ಡೌನ್ ಸಂಧರ್ಭ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಭಾರತ ಸರ್ಕಾರದ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ವಿವರ ಹೀಗಿದೆ
ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳು ಲಾಕ್‍ಡೌನ್‍ನಿಂದ ಹೊರತಾಗಿವೆ. ಪಶುಚಿಕಿತ್ಸಾ ಆಸ್ಪತ್ರೆಗಳು. ಕನಿಷ್ಟ ಬೆಂಬಲ ಬೆಲೆ ನೀಡುವ ಸಂಸ್ಥೆಗಳು ಸಹಿತವಾಗಿ, ಕೃಷಿ ಉತ್ಪನ್ನಗಳನ್ನು ಸಂಗ್ರಹಿಸುವ ಸಂಸ್ಥೆಗಳು. ರಾಜ್ಯ ಸರ್ಕಾರದ ಪರವಾನಗಿ ಪಡೆದ ಅಥವಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ನಡೆಯುವ ಮಂಡಿಗಳು. ಕೃಷಿಕರು ಹಾಗೂ ಕೃಷಿ ಕಾರ್ಮಿಕರಿಂದ ನಡೆಯುವ ಕೃಷಿ ಚಟುವಟಿಕೆಗಳು. ಕೃಷಿ ಯಂತ್ರೋಪಕರಣಗಳ ಬಾಡಿಗೆ ನೀಡುವ ಕೇಂದ್ರಗಳು. ರಸಗೊಬ್ಬರಗಳು, ಕ್ರಿಮಿನಾಶಕಗಳು ಹಾಗೂ ಬೀಜಗಳ ಉತ್ಪಾದನಾ ಮತ್ತು ಪ್ಯಾಕ್ ಮಾಡುವ ಕೇಂದ್ರಗಳು. ರಾಜ್ಯದ ಒಳಗೆ ಹಾಗೂ ಹೊರ ರಾಜ್ಯಗಳಿಂದ ಕೊಯ್ಲಿಗೆ ಹಾಗೂ ಬಿತ್ತನೆಗಾಗಿ ಬಳಸುವ ಕೊಯ್ಲು ಯಂತ್ರಗಳು ಮತ್ತು ಕೃಷಿ ಹಾಗೂ ತೋಟಗಾರಿಕೆಗೆ ಬಳಸುವ ಉಪಕರಣಗಳ ಸಾಗಾಣಿಕೆ ಚಲನವಲನಗಳು. ಪ್ರಸ್ತುತ ದೇಶದೆಲ್ಲೆಡೆ ಲಾಕ್‍ಡೌನ್ ಇರುವಾಗ, ಈ ರಿಯಾಯಿತಿಗಳು ಕೃಷಿ ಹಾಗೂ ಪೂರಕ ಚಟುವಟಿಕೆಗಳು ಅನಿರ್ಬಂಧಿತವಾಗಿ ಸಾಗಲು ಸಹಾಯ ಮಾಡುತ್ತವೆ ಹಾಗೂ ಅಗತ್ಯ ಸಾಮಾಗ್ರಿಗಳು ಕೃಷಿಕರಿಗೆ ದೊರೆತು, ಅವರು ಅನಗತ್ಯ ತೊಂದರೆಗೆ ಸಿಲುಕದಂತೆ ನೋಡಿಕೊಳ್ಳುತ್ತವೆ.
ಅಗತ್ಯ ಆದೇಶಗಳನ್ನು ಸಂಬಂಧಿತ ಮಂತ್ರಾಲಯಗಳಿಗೆ, ರಾಜ್ಯ ಸರ್ಕಾರ ಇಲಾಖೆಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಇಲಾಖೆಗಳಿಗೆ ಈ ರಿಯಾಯಿತಿ ಜಾರಿಗೆ ತರಲು ಈಗಾಗಲೇ ನೀಡಲಾಗಿದೆ. ಅಗತ್ಯಕ್ಕನುಸಾರವಾಗಿ, ಕೃಷಿ ಹಾಗೂ ಕೃಷಿಕರ ಕ್ಷೇಮಾಭಿವೃದ್ಧಿ ಮಂತ್ರಾಲಯ, ಭಾರತ ಸರ್ಕಾರ ಇದರ ಕೋರಿಕೆಯ ಮೇರೆಗೆ). ಭಾರತ ಸರ್ಕಾರದ ನಿಯಮ ನಿರ್ದೇಶನಗಳಿಗನುಸಾರವಾಗಿ, ರಾಜ್ಯ ಸರ್ಕಾರಗಳ ವಿವಿಧ ಮಂತ್ರಾಲಯಗಳೂ/ ಇಲಾಖೆಗಳು ಅಗತ್ಯ ಮಾರ್ಗಸೂಚಿಗಳನ್ನು ಜಾರಿಗೆ ತರಲು ಆದೇಶಗಳನ್ನು ನೀಡಿದ್ದು, ಕೃಷಿ ಹಾಗೂ ಪೂರಕ ಚಟುವಟಿಕೆಗಳು ನಿರಂತರವಾಗಿ ಸಾಗಲು ಸಹಾಯಮಾಡಲಿವೆ.
ಕೃಷಿಕರಿಗೆ ಸಲಹೆಗಳು: ಬೆಳೆಗಳ ಕೊಯ್ಲು ಹಾಗೂ ಒಕ್ಕಣೆ: ಕೋವಿಡ್-19 ವಿಷಮ ಪರಿಸ್ಥಿತಿಯ ನಡುವೆ ಹಿಂಗಾರಿನ ಬೆಳೆಗಳು ಕೊಯ್ಲಿನ ಹಂತಕ್ಕೆ ಬಂದಿರುತ್ತವೆ. ಈ ಸನ್ನಿವೇಶದಲ್ಲಿಯೇ ಕೃಷಿ ಬೆಳೆಗಳನ್ನುಕೊಯ್ಲು ಮಾಡಿ ಸಂಗ್ರಹಿಸಿ ಮಾರುಕಟ್ಟೆಗೆ ಸಾಗಿಸುವುದು ಅನಿವಾರ್ಯ ಅಗತ್ಯಗಳಲ್ಲೊಂದು. ಈ ಎಲ್ಲಾ ಚಟುವಟಿಕೆಗಳು ಸಂದರ್ಭಾನುಸಾರ ಕಾಲಕ್ಕೆ ತಕ್ಕಂತೆ ಮಾಡಬೇಕಾದವು.
ಆದರೆ, ಕೃಷಿಕರು ಕೆಲವು ಅತ್ಯಂತ ಅಗತ್ಯ ಮುಂಜಾಗ್ರತಾ ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ಈ ಭೀಕರ ರೋಗದ ಪ್ರಸಾರ ತಡೆಗಟ್ಟಲೇಬೇಕು. ಸರಳ ಮಾರ್ಗಗಳಾದ, ಸಾಮಾಜಿಕ ದೂರವಿರುವಿಕೆ, ವೈಯಕ್ತಿಕ ಶುಚಿತ್ವವನ್ನು, ಆಗಾಗ್ಗೆ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳುವುದರಿಂದ ಕಾಪಾಡಿಕೊಳ್ಳುವುದು, ಮುಖ ಗವುಸು ಧರಿಸುವುದು, ಸುರಕ್ಷಿತ ಬಟ್ಟೆಗಳನ್ನು ಧರಿಸುವುದು (ಪೂರ್ಣ ದೇಹಮುಚ್ಚುವಂಥಹ), ಹಾಗೂ ಯಂತ್ರೋಪಕರಣಗಳನ್ನು ತೊಳೆದು ಶುದ್ಧವಾಗಿಟ್ಟುಕೊಳ್ಳುವುದು ಇವುಗಳನ್ನು ತಪ್ಪದೇ ಪಾಲಿಸಬೇಕು. ಕೆಲಸಗಾರರು ಸುರಕ್ಷತಾ ಕ್ರಮಗಳನ್ನು ಹಾಗೂ ಸಾಮಾಜಿಕ ದೂರವಿರುವಿಕೆಯನ್ನು ಕ್ಷೇತ್ರ ಮಟ್ಟದ ಪ್ರತಿ ಹಂತದ ಚಟುವಟಿಕೆಗಳ ಕ್ರಿಯೆಯಲ್ಲಿ ತಪ್ಪದೇ ಪಾಲಿಸಬೇಕು.
ಈ ಸಂದರ್ಭದಲ್ಲಿ ಯಂತ್ರಗಳ ರಿಪೇರಿ, ನಿರ್ವಹಣೆ ಹಾಗೂ ಕೊಯ್ಲು ಕಾರ್ಯಮಾಡುವ ಕಾರ್ಮಿಕರ ಸುರಕ್ಷತೆ ಹಾಗೂ ಮುಂಜಾಗ್ರತೆ ಕ್ರಮಗಳನ್ನು ತಪ್ಪದೇ ಗಮನಿಸಬೇಕು. ಸಾಸಿವೆ, ಹಿಂಗಾರು/ ಚಳಿಗಾಲದ ಮತೊಂದು ಪ್ರಮುಖ ಬೆಳೆ ಮತ್ತು ಅದರ ಕೊಯ್ಲು ಕೆಲಸಗಾರಿಂದ ಆರಂಭಗೊಂಡಿದ್ದು, ಕೆಲವೆಡೆ ಕೊಯ್ಲು ಮುಗಿದು ಒಕ್ಕಣೆ ಮಾತ್ರ ಬಾಕಿ ಉಳಿದಿದೆ. ಕಬ್ಬು ಬೆಳೆಯ ಕೊಯ್ಲು ಚುರುಕುಗೊಂಡಿದೆ.
ವಿವಿಧ ಬೆಳೆಗಳು, ಹಣ್ಣುಗಳು, ತರಕಾರಿಗಳು, ಕೊಯ್ಲಿನಲ್ಲಿ ತೊಡಗಿರುವ ಕೆಲಸಗಾರರು ವೈಯಕ್ತಿಕ ಶುಚಿತ್ವ ಮತ್ತು ಸಾಮಾಜಿಕ ದೂರವಿರುವಿಕೆಯನ್ನು ಕೊಯ್ಲಿನ ಪ್ರಕ್ರಿಯೆಯ ಪ್ರತಿ ಹಂತದಲ್ಲಿಯೂ ಪಾಲಿಸತಕ್ಕದ್ದು. ಕಾರ್ಮಿಕರೇ ಕೊಯ್ಲು ಮಾಡುವ ಬೆಳೆಗಳಿಗೆ, ಒಂದು ಸಾಲಿನಿಂದ ಇನ್ನೊಂದು ಸಾಲಿಗೆ 4-5 ಅಡಿ ಅಂತರ ಕಾಯ್ದುಕೊಳ್ಳುವಂತೆ ಕೆಲಸಗಾರರಿಗೆ ಸೂಚಿಸಬೇಕು, ಇದರಿಂದ ಅಗತ್ಯವಿರುವ ಅಂತರವನ್ನು ಇಬ್ಬರು ಕಾರ್ಮಿಕರ ನಡುವೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಈ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿರುವವರೆಲ್ಲ ಆಗಾಗ್ಗೆ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು.
ವ್ಯಕ್ತಿಯಿಂದ ವ್ಯಕ್ತಿಗೆ 3-4 ಅಡಿಗಳ ಅಂತರವನ್ನು ವಿಶ್ರಾಂತಿ ಸಮಯದಲ್ಲಿ, ಆಹಾರ ಸೇವನೆಯ ಸಂದರ್ಭದಲ್ಲಿ, ಕೃಷಿ ಉತ್ಪನ್ನಗಳನ್ನು ಸಂಗ್ರಹಿಸುವಾಗ, ಇಳಿಸುವಾಗ/ ಹೊತ್ತೊಯ್ದು ಅಡಕಿಸುವಾಗ ಹೀಗೆ ಪ್ರತಿ ಹಂತದಲ್ಲೂ ಸುರಕ್ಷಿತಾ ದೃಷ್ಟಿಯಿಂದ ಕಾಯ್ದುಕೊಳ್ಳಬೇಕು. ಸಾಧ್ಯವಾದ ಮಟ್ಟಿಗೆ ಕ್ಷೇತ್ರ ಚಟುವಟಿಕೆಗಳನ್ನು ವಿಂಗಡಿಸುತ್ತಾ ನಿರ್ವಹಿಸಲು ಯೋಜಿಸಿ ಮತ್ತು ಒಂದೇ ದಿನ ಹೆಚ್ಚು ಕೆಲಸಗಾರರನ್ನು ನಿಯೋಜಿಸುವುದನ್ನು ತಪ್ಪಿಸಿ. ಸಾಧ್ಯವಾದ ಮಟ್ಟಿಗೆ ಪರಿಚರಸ್ಥ ಕೆಲಸಗಾರರನ್ನಷ್ಟೆ ಕ್ಷೇತ್ರ ಕಾರ್ಯಗಳಿಗೆ ಪೂರ್ಣ ವಿಚಾರಿಸಿ ತೆಗೆದುಕೊಳ್ಳಿ. ಏಕೆಂದರೆ, ಅಪರಿಚಿತ ವ್ಯಕ್ತಿಗಳು ರೋಗಾಣು ವಾಹಕರಾಗಿರಬಹುದಾದ ಸಾಧ್ಯತೆಗಳಿದೆ. ಆರೋಗ್ಯವಂತ ವ್ಯಕ್ತಿಗಳನ್ನಷ್ಟೆ ನಿಯೋಜಿಸಿ. ಎಲ್ಲೆಲ್ಲಿ ಸಾಧ್ಯವೋ, ಅಂತಹ ಕೆಲಸಗಳಿಗೆ ಕಾರ್ಮಿಕರ ಬದಲು ಯಂತ್ರೋಪಕರಣಗಳ ಸಹಾಯವನ್ನು ಪಡೆದು ಕಾರ್ಯಗಳನ್ನು ನಿರ್ವಹಿಸಿ.
ಕೃಷಿ ಉತ್ಪನ್ನಗಳ ಕೊಯ್ಲೋತ್ತರ, ಸಂಗ್ರಹ ಹಾಗೂ ಮಾರಾಟ: ಕ್ಷೇತ್ರ ಮಟ್ಟದಲ್ಲಿ ಉತ್ಪನ್ನಗಳನ್ನು ಒಣಗಿಸುವಾಗ, ಒಕ್ಕಣಿಸುವಾಗ, ತೂರುವಾಗ, ಸ್ವಚ್ಚಗೊಳಿಸುವಾಗ, ಬೇರ್ಪಡಿಸುವಾಗ, ಚೀಲಗಳಲ್ಲಿ ಕಟ್ಟಿಡುವಾಗ, ಮುಖಗವಸನ್ನು ತಪ್ಪದೇ ಧರಿಸುವುದರಿಂದ ಸಣ್ಣ ಧೂಳಿನ ಕಣಗಳು ಹಾಗೂ ಅತಿ ಸೂಕ್ಷ್ಮ ತೇವಾಂಶಭರಿತ ಕಣಗಳು ಉಸಿರಾಟದ ತೊಂದರೆ ಮಾಡುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಕ್ಷೇತ್ರ/ಮನೆಗಳಲ್ಲಿ ಸಮರ್ಪಕವಾಗಿ ಒಣಗಿಸುವಿಕೆಯ ನಂತರವೇ ಧವಸ ಧಾನ್ಯ, ಬೇಳೆಕಾಳುಗಳನ್ನು ಸಂಗ್ರಹ ಮಾಡಿ ಕಟ್ಟಿಡಬೇಕು.
ಕ್ರಿಮಿ ಹಾವಳಿ ತಡೆಯಲು (ಹಳೆಯ ಗೋಣಿ ಚೀಲಗಳನ್ನು) ಪ್ರತಿಶತ 5 ರ ಬೇವಿನ ದ್ರಾವಣದಲ್ಲಿ ಅದ್ದಿ, ಒಣಗಿಸಿ ಬಳಸಬೇಕು. ಅಗತ್ಯವಿರುವ ಮುಂಜಾಗ್ರತಾ ಕ್ರಮಗಳೊಂದಿಗೆ ಉತ್ಪನ್ನಗಳನ್ನು ಗೋಣಿ ಚೀಲಗಳಲ್ಲಿ ಸಂಗ್ರಹಿಸಬಹುದು. ಅಥವಾ ಸಮೀಪದ ಶೈತ್ಯಾಗಾರ/ ಗೋದಾಮುಗಳಲ್ಲಿಯಾದರೂ ಸಂಗ್ರಹಿಸಿ ಶೇಖರಿಸಬಹುದು (ಒಳ್ಳೆಯ ಬೆಲೆ ಬರುವ ತನಕ). ಅಗತ್ಯ ವೈಯಕ್ತಿಕ ಸುರಕ್ಷತಾ ಕ್ರಮಗಳನ್ನು ಉತ್ಪನ್ನಗಳ ಅಡಕ, ಸಾಗಣೆ, ಹಾಗೂ ಮಾರುಕಟ್ಟೆ/ಹರಾಜು ಕಟ್ಟೆಗಳಲ್ಲಿ ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿರುವಾಗ ತಪ್ಪದೇ ಪಾಲಿಸಬೇಕು. ಬೀಜೋತ್ಪಾದನೆ ಮಾಡುವ ಕೃಷಿಕರು ಉತ್ಪಾದಿಸಿದ ಬೀಜಗಳನ್ನು (ಸೂಕ್ತ ದಾಖಲೆಗಳೊಂದಿಗೆ) ಸಾಗಾಣೆ ಹಾಗೂ ಕಂಪನಿಗಳಿಗೆ ಮಾರಾಟ ಮಾಡಲು ಅನುಮತಿ ಇದೆ. ಮಾರಿದ ಬೀಜಗಳಿಗೆ ಹಣವನ್ನು ಪಡೆಯುವಾಗ ಮುಂಜಾಗ್ರತ ಕ್ರಮಗಳನ್ನು ಅನುಸರಿಸಬೇಕು.
ಬೀಜ ಸಂರಕ್ಷಣೆ/ ಪ್ಯಾಕಿಂಗ್ ಕಾರ್ಖಾನೆಗಳು ಕಾರ್ಯನಿರ್ವಹಿಸುವುದು ಹಾಗೂ ಬೀಜಗಳನ್ನು ಬೀಜೋತ್ಪಾದನೆ ಮಾಡಿದ ರಾಜ್ಯಗಳಿಂದ ಅವುಗಳನ್ನು ಬೆಳೆಗಳಾಗಿ ಬೆಳೆಯುವ ರಾಜ್ಯಗಳಿಗೆ (ಉದಾಹರಣೆಗೆ ದಕ್ಷಿಣದಿಂದ ಉತ್ತರಕ್ಕೆ) ಬರುವ ಮುಂಗಾರಿಗೆ ದೊರಕುವಂತೆ ಸಾಗಾಣೆ ಮಾಡಬೇಕಾಗಿರುವುದು ಅತ್ಯಂತ ಅಗತ್ಯವಾಗಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: