ಪ್ರಮುಖ ಸುದ್ದಿ

ಪ್ರಾರ್ಥನೆಗೆ ನಿರ್ಬಂಧ : ಸಹಕರಿಸಲು ವಕ್ಫ್ ಸಮಿತಿ ಮನವಿ

ರಾಜ್ಯ( ಮಡಿಕೇರಿ) ಏ.2 :- ಕೊರೋನಾ ಸೋಂಕು ಹರಡದಂತೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಪೂರಕವಾಗಿ ರಾಜ್ಯ ವಕ್ಫ್ ಮಂಡಳಿ ಮಸೀದಿಗಳಲ್ಲಿ ಶುಕ್ರವಾರದ ಮಧ್ಯಾಹ್ನದ ನಮಾಜ್ ಸೇರಿದಂತೆ ಪ್ರತಿದಿನದ ಪ್ರಾರ್ಥನೆಗಳನ್ನು ಕೂಡ ನಿರ್ಬಂಧಿಸಿ ಆದೇಶ ಹೊರಡಿಸಿರುವುದರಿಂದ ಮುಸಲ್ಮಾನ ಬಾಂಧವರು ಸಹರಿಸಬೇಕೆಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕೆ.ಎ.ಯಾಕುಬ್ ಮನವಿ ಮಾಡಿದ್ದಾರೆ.
ಮಾಧ್ಯಮ ಪ್ರಕಟಣೆ ನೀಡಿರುವ ಅವರು ಈ ಹಿಂದೆ ಮಾ.31 ರವರೆಗೆ ನಿರ್ಬಂಧ ವಿಧಿಸಲಾಗಿತ್ತು, ಇದೀಗ ಈ ಕ್ರಮವನ್ನು ಏ.14 ರವರೆಗೆ ಮುಂದುವರಿಸಿರುವುದರಿಂದ ಮುತವಲ್ಲಿಗಳು, ಅಧ್ಯಕ್ಷರು ಹಾಗೂ ಖತೀಬರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮುಸಲ್ಮಾನ ಬಾಂಧವರು ಮನೆಯಲ್ಲೇ ಪ್ರಾರ್ಥನೆಯನ್ನು ಸಲ್ಲಿಸುವ ಮೂಲಕ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಕೋರಿದ್ದಾರೆ.
ಈ ಹಿಂದೆ ಅತಿವೃಷ್ಟಿ ಹಾನಿ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಎಲ್ಲಾ ಸಿಬ್ಬಂದಿ ವರ್ಗ ಇಂದು ಕೊರೋನಾ ವೈರಸ್ ಹರಡದಂತೆ ತಡೆಯಲು ರಾತ್ರಿ, ಹಗಲೆನ್ನದೆ ಶ್ರಮಿಸುತ್ತಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಜನಪರ ಕಾಳಜಿಗೆ ಸಂಪೂರ್ಣ ಬೆಂಬಲ ಸೂಚಿಸುವುದಾಗಿ ಯಾಕುಬ್ ತಿಳಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: