ಮೈಸೂರು

ಕಾರ್ಮಿಕ ಇಲಾಖೆಯಿಂದ ಕೊರೋನಾ ವೈರಸ್ ಕುರಿತ ಜಾಗೃತಿ ಆಂದೋಲನ

ಮೈಸೂರು,ಏ.1:- ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ  ಕ್ರೆಡಿಟ್ – ಐ ಸಂಸ್ಥೆಯ ಸಹಯೋಗದಲ್ಲಿ “ಕೊರೋನ ವೈರಸ್ (ಕೋವಿಡ್ 19) ಕುರಿತು ಜಾಗೃತಿ ಅಭಿಯಾನ” ಮೈಸೂರು ಜಿಲ್ಲೆಯಾದ್ಯಂತ ನಡೆಸಲಾಗುತ್ತಿದೆ.

ಮಾ.24ರಿಂದ ಆರಂಭವಾದ ಈ ಜಾಗೃತಿ ಕಾರ್ಯಕ್ರಮವನ್ನು ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತರಾದ ಡಾ. ಎ.ಸಿ. ತಮ್ಮಣ್ಣ  ಕೊರೋನ ಕುರಿತ ಜಾಗೃತಿ ಕರಪತ್ರ ಬಿಡುಗಡೆ ಮಾಡುವ ಹಾಗೂ ಆಟೋಗಳ ಮೂಲಕ ಪ್ರಚಾರ ಮಾಡುವ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ಉದ್ಘಾಟಿಸಿದರು. ಕಳೆದ 8 ದಿನಗಳಿಂದ ನಡೆಯುತ್ತಿರುವ ಈ ಜಾಗೃತಿ ಅಭಿಯಾನ ಕಾರ್ಯಕ್ರಮದ ಅವಧಿಯಲ್ಲಿ ಮೈಸೂರು ಜಿಲ್ಲೆಯ ಕೆ.ಆರ್.ನಗರ, ಪಿರಿಯಾಪಟ್ಟಣ, ಹುಣಸೂರು, ಹೆಗ್ಗಡದೇವನಕೋಟೆ, ಮೈಸೂರು, ಟಿ.ನರಸೀಪುರ, ಸರಗೂರು ಹಾಗೂ ನಂಜನಗೂಡು ತಾಲೂಕುಗಳ ಹಲವಾರು ಗ್ರಾಮಗಳಲ್ಲಿ ವಾಸಿಸುವ ಕಟ್ಟಡ ಹಾಗೂ ಇನ್ನಿತರ ನಿರ್ಮಾಣ ಕಾರ್ಯಗಳಲ್ಲಿ ತೊಡಗಿರುವ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ಹಣ್ಣು ಮತ್ತು ತರಕಾರಿ ಮಾರಾಟ ಮಾಡುವ ಬೀದಿಬದಿ ವ್ಯಾಪಾರಿಗಳು, ಪೌರಕಾರ್ಮಿಕರು, ನಿರಾಶ್ರಿತರ ತಂಗುದಾಣದ ನಿವಾಸಿಗಳು ಹಾಗೂ ಲಾಕ್ ಡೌನ್ ಸಂದರ್ಭದಲ್ಲಿ ನಿರಾಶ್ರಿತರಾದವರು ಮೊದಲಾದ ಸುಮಾರು 10,000 ಕ್ಕೂ ಹೆಚ್ಚು ಜನರಿಗೆ ಮಾಸ್ಕ್, ಸ್ಯಾನಿಟೈಸರ್, ಸೋಪು, ಬಿಸ್ಕೆಟ್ ಹಾಗೂ ಕರೋನ ವೈರಸ್ ಕುರಿತಾದ ಕರಪತ್ರ ಮೊದಲಾದವುಗಳನ್ನು ವಿತರಿಸಲಾಗಿದೆ.  ಮಂಜುಳಾದೇವಿ, ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ಕಾರ್ಮಿಕ ಇಲಾಖೆ,ಮೈಸೂರು ನಗರವೂ ಸೇರಿದಂತೆ ಮೈಸೂರು ಜಿಲ್ಲೆಯ ಕಾರ್ಮಿಕ ನಿರೀಕ್ಷಕರುಗಳು, ಪ್ರೊ. ಮಹದೇವಪ್ಪ, ಕಾರ್ಯದರ್ಶಿಗಳು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಮೈಸೂರು, ಡಾ. ಲಕ್ಷ್ಮೀದೇವಿ, ವೈಸ್ ಚೇರ್ಮನ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಡಾ. ಎಂ.ಪಿ. ವರ್ಷ, ಮ್ಯಾನೇಜಿಂಗ್ ಟ್ರಸ್ಟಿ, ಕ್ರೆಡಿಟ್ – ಐ ಸಂಸ್ಥೆ, ಹೇಮಲತಾ, ಖ್ಯಾತ ವಕೀಲರು ಹಾಗೂ ಆಡಳಿತ ಮಂಡಳಿ ಸದಸ್ಯರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಪ್ರೊ. ಮನೋನ್ಮಣಿ ಎಂ.ಎಸ್., ರಾ.ಸೇ.ಯೋ ಅಧಿಕಾರಿಗಳು, ಮಹಾರಾಣಿ ಮಹಿಳಾ ಕಲಾ ಕಾಲೇಜು, ಬಿ.ಎಸ್. ಸುಧಾ ಹಾಗೂ ,ಬಿ.ಎಸ್. ವನಜ, ಸದಸ್ಯರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮೊದಲಾದವರು ಭಾಗವಹಿಸಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: