ಪ್ರಮುಖ ಸುದ್ದಿಮನರಂಜನೆ

 ‘ಸ್ಟಾರ್ ವಾರ್ಸ್’ ನಟ ಆಂಡ್ರ್ಯೂ ಜ್ಯಾಕ್ ಕೊರೋನಾ ವೈರಸ್ ಸೋಂಕಿನಿಂದ ನಿಧನ

ದೇಶ(ನವದೆಹಲಿ) ಏ.1:-  ‘ಸ್ಟಾರ್ ವಾರ್ಸ್’ ನಟ ಆಂಡ್ರ್ಯೂ ಜ್ಯಾಕ್ ಅವರು ಕೊರೋನಾ ವೈರಸ್ ಸೋಂಕಿಗೆ ಒಳಗಾಗಿ ನಿಧನರಾಗಿದ್ದಾರೆ.

ಆಂಡ್ರ್ಯೂ ಜ್ಯಾಕ್ ಅವರ ಸಾವಿನಿಂದಾಗಿ ಚಿತ್ರೋದ್ಯಮವು ಆಘಾತಕ್ಕೊಳಗಾಗಿದೆ, ಏಕೆಂದರೆ ಕೊರೋನಾದ ದಾಳಿಯಿಂದ   ಅನೇಕ ಕಲಾವಿದರು ಸಾವನ್ನಪ್ಪಿದ್ದಾರೆ. ಆಂಡ್ರ್ಯೂ ಜ್ಯಾಕ್‌ ನಿಧನಕ್ಕೂ  ಮೊದಲು ಗ್ರ್ಯಾಮಿ ಮತ್ತು ಸಿಎಂಎ ಪ್ರಶಸ್ತಿಗಳನ್ನು ಪಡೆದ ಪ್ರಸಿದ್ಧ ಅಮೆರಿಕನ್ ಗಾಯಕ ಜೋ ಡಿಫಿ ಮತ್ತು ಜಪಾನಿನ ಹಾಸ್ಯನಟ ಕೆನ್ ಶಿಮುರಾ ಕೂಡ ಕೊರೋನಾ ವೈರಸ್‌ನಿಂದ ನಿಧನ ಹೊಂದಿದ್ದಾರೆ.

ಆಂಡ್ರ್ಯೂ ಜ್ಯಾಕ್ ಅವರ ಪತ್ನಿ ಗೇಬ್ರಿಯಲ್ ರೋಜರ್ಸ್ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ. ಪತಿಯ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿದ ಅವರು ಟ್ವೀಟರ್ ನಲ್ಲಿ, ‘ನಾವು ಇಂದು ಒಬ್ಬ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಆಂಡ್ರ್ಯೂ ಜ್ಯಾಕ್‌ಗೆ 2 ದಿನಗಳ ಹಿಂದೆ ಕೊರೋನಾ ವೈರಸ್ ಇರುವುದು ಪತ್ತೆಯಾಗಿತ್ತು. ಅವರಿಗೆ ಯಾವುದೇ ನೋವು ಇರಲಿಲ್ಲ,    ಕುಟುಂಬವು ತನ್ನೊಂದಿಗಿದೆ ಎಂಬುದನ್ನು ತಿಳಿದು ಶಾಂತಿಯುತವಾಗಿ ಹೊರಟುಹೋದರು ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. (ಏಜೆನ್ಸಿಸ್,ಎಸ್.ಎಚ್).

Leave a Reply

comments

Related Articles

error: