ಮೈಸೂರು

ಮೈಸೂರು ನಗರದ ಎಲ್ಲಾ ಬಡಾವಣೆಗಳಿಗೂ ರಾಸಾಯನಿಕ ಸಿಂಪಡಣೆ ಮೂಲಕ ಸ್ವಚ್ಛತೆ ಕಾಪಾಡುವುದು, ನಿರಾಶ್ರಿತರಿಗೆ ಊಟ ಕುರಿತು ಒಕ್ಕೊರಲಿನ ತೀರ್ಮಾನ

ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ನಡೆದ ಸಭೆ

ಮೈಸೂರು,ಏ.2:-  ಮೈಸೂರು ನಗರದ ಎಲ್ಲಾ ಬಡಾವಣೆಗಳಿಗೂ ರಾಸಾಯನಿಕ ಸಿಂಪಡಣೆ ಮೂಲಕ ಸ್ವಚ್ಛತೆ ಕಾಪಾಡುವುದು, ನಿರಾಶ್ರಿತರಿಗೆ ಊಟ, ವಸತಿ ನೀಡುವುದರ ಜತೆಗೆ ಮನೆ ಮನೆಗೆ ಹಣ್ಣು-ತರಕಾರಿ ಮತ್ತು ಪಡಿತರ ವಿತರಣೆ, ವಾರದಲ್ಲಿ ಮೂರು ದಿನ ಮಟನ್ ಮಾರಾಟಕ್ಕೆ ಅವಕಾಶ ನೀಡುವ ಕುರಿತಂತೆ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ  ನಿನ್ನೆ  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಯಿತು.

ಮೈಸೂರು ಮಹಾ ನಗರ ಪಾಲಿಕೆ, ಮುಡಾ, ಪೊಲೀಸ್, ಅಗ್ನಿಶಾಮಕ ಅಧಿಕಾರಿಗಳೊಂದಿಗೆ ಸಭೆ ನಡೆದಿದ್ದು,  ಮನೆಯಿ ಲ್ಲದ ನಿರಾಶ್ರಿತರಿಗಾಗಿ ತೆರೆದಿರುವ ಪುನರ್ ವಸತಿ ಕೇಂದ್ರಗಳಲ್ಲಿ ಊಟ, ವಸತಿ ನೀಡುವುದರ ಜತೆಗೆ ಮನೆ ಮನೆಗೆ ಹಣ್ಣು-ತರಕಾರಿ ಮತ್ತು ಪಡಿತರ ವಿತರಣೆ ಮಾಡುವುದು, ಸೊಳ್ಳೆಗಳು ಮತ್ತು ಕೊರೊನಾ ವೈರಸ್ ಹರಡದಂತೆ ರಾಸಾಯನಿಕ ಸಿಂಪಡಣೆ, ಮಟನ್ ವ್ಯಾಪಾರ, ಕುಡಿಯುವ ನೀರು ಮತ್ತು ವಿದ್ಯುತ್ ಪೂರೈಕೆ ಕುರಿತಂತೆ ಚರ್ಚಿಸಲಾಯಿತು.

ಸಚಿವ ವಿ.ಸೋಮಣ್ಣ ಮಾತನಾಡಿ ಕೊರೊನಾ ವೈರಸ್‍ನಿಂದ ದೇಶದ ಜನತೆ ಆತಂಕದಲ್ಲಿದ್ದಾರೆ. ಸರ್ಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿದೆ. ಈ ವೇಳೆ ಎಪಿಎಲ್-ಬಿಪಿಎಲ್ ಕಾರ್ಡುದಾರರು ಎಂದು ಪರಿಗಣಿಸದೆ ಎಲ್ಲರಿಗೂ ಪಡಿತರ ವಿತರಣೆ ಮಾಡಬೇಕು ಎಂದು ಸೂಚನೆ ನೀಡಿದರು.

ಪರಸ್ಪರ ಹೊಂದಾಣಿಕೆಯಿಂದ ಅಧಿಕಾರಿಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಸಮಾ ಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಜವಾಬ್ದಾರಿ ಯುತವಾಗಿ ಕೆಲಸ ಮಾಡಬೇಕು. ಈ ಪರಿಸ್ಥಿತಿ ಯಲ್ಲಿ ಅಧಿಕಾರಿಗಳು ಸೈನಿಕರಂತೆ ಕರ್ತವ್ಯ ನಿರ್ವ ಹಿಸುವ ಅವಶ್ಯಕತೆಯಿದೆ. ಸರ್ಕಾರಕ್ಕೆ ಜಾತಿ-ಕುಲವಿಲ್ಲ. ಸಮಾಜದ ಅಭಿವೃದ್ಧಿಗಾಗಿ ಕಷ್ಟದಲ್ಲಿರು ವವರ ಪರವಾಗಿ ಮಾತ್ರ ಕೆಲಸ ಮಾಡುವು ದಷ್ಟೇ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮನಸ್ತಾಪ ಬಿಟ್ಟು ಕೆಲಸ ಮಾಡಿ ಎಂದು ಮನವಿ ಮಾಡಿದರು.

ಮಾಜಿ ಸಚಿವ ಜಿ.ಟಿ. ದೇವೇಗೌಡ ಮಾತನಾಡಿ  ಕೊರೊನಾ ವೈರಸ್ ತಡೆಗೆ ಮುಖ್ಯವಾಗಿ ಸಾರ್ವಜನಿಕರು ಮನೆ ಯಿಂದ ಹೊರಗೆ ಬರದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಿರಾಶ್ರಿತರಿಗೆ ವಸತಿ ಕೇಂದ್ರಗಳಲ್ಲಿ ಊಟ-ವಸತಿ ನೀಡಲಾಗುತ್ತಿದೆ. ಜೊತೆಗೆ ಮನೆ ಮನೆಗೆ ಹಣ್ಣು-ತರಕಾರಿ ಮತ್ತು ಪಡಿತರ ವಿತರಣೆ ಮಾಡಿದರೆ ಮನೆಯಿಂದ ಹೊರಬರುವವರ ಸಂಖ್ಯೆ ಕಡಿಮೆಯಾಗುತ್ತದೆ. ಪಡಿತರ ಕಾರ್ಡ್ ಇದ್ದವರಿಗಷ್ಟೇ ಅಲ್ಲದೆ ಇಲ್ಲದವರಿಗೂ ಪಡಿತರ ಅಕ್ಕಿ ವಿತರಣೆ ಯಾದರೆ ಒಳ್ಳೆಯದು ಎಂದರು.

ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಕೊರೊನಾ ಸೊಂಕು ನಿಯಂತ್ರಣಕ್ಕೆ ಗಲ್ಲಿ ಗಲ್ಲಿಗೂ ರಾಸಾಯನಿಕ ಸಿಂಪಡಣೆಯಾಗಬೇಕು. ಕುಡಿಯುವ ನೀರು ಮತ್ತು ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗ ದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಶಾಸಕ ಎಲ್.ನಾಗೇಂದ್ರ ಮಾತನಾಡಿ, ಚಾಮರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ಕಡೆ ಸಾಂತ್ವನ ಕೇಂದ್ರಗಳನ್ನು ತೆರೆಯ ಲಾಗಿದ್ದು, ಮತ್ತಷ್ಟು ಸಾಂತ್ವನ ಕೇಂದ್ರಗಳ ಅಗತ್ಯವಿದೆ. ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿ ತೆರೆದಿರುವ ಪುನರ್‍ವಸತಿ ಕೇಂದ್ರದಲ್ಲಿ ನಿರಾಶ್ರಿತರ ಸಂಖ್ಯೆ ಹೆಚ್ಚಾಗಿದ್ದು, ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ಮತ್ತು ನಿರ್ವಹಣೆ ಮಾಡಲು ಕಷ್ಟವಾಗು ತ್ತಿದೆ. ಉಚಿತವಾಗಿ ಊಟ ನೀಡುತ್ತಾರೆಂದು ಕೆಲವರು ನಿರಾಶ್ರಿತರೆಂದು ಹೇಳಿಕೊಂಡು ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ಬೇರೆ ಕಡೆಗಳಲ್ಲಿಯೂ ಪುನರ್ ವಸತಿ ಕೇಂದ್ರ ತೆರೆಯಬೇಕು ಎಂದರು.

ಮಟನ್ ವ್ಯಾಪಾರಕ್ಕೆ ಅನುಮತಿ ನೀಡಿರುವುದ ರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಮಟನ್ ಸ್ಟಾಲ್‍ಗಳಲ್ಲಿ ನೂಕು-ನುಗ್ಗಲು ಹೆಚ್ಚಾಗುತ್ತಿದೆ. ಕೂಡಲೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ ಪ್ರತಿ ವಾರ್ಡ್‍ನಲ್ಲಿಯೂ ರಾಸಾಯನಿಕ ಸಿಂಪಡಣೆಯಾಗಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಮತ್ತು ನಗರಪಾಲಿಕೆ ಆಯುಕ್ತ ಗುರುದತ್ ಹೆಗಡೆ,   ಸಂಸದ ಪ್ರತಾಪ್ ಸಿಂಹ, ಮೇಯರ್ ತಸ್ನೀಂ, ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಂ, ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ, ಮುಡಾ ಆಯುಕ್ತ ಕಾಂತರಾಜು ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: