ಮೈಸೂರು

ಮೈಸೂರು ಜಿಲ್ಲೆಯಲ್ಲಿ 19ಕ್ಕೇರಿದ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ

ಮೈಸೂರು,ಏ.2:- ಸಾಂಸ್ಕೃತಿಕ ನಗರೀ ಮೈಸೂರು ಜಿಲ್ಲೆಯಲ್ಲಿ  ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಿನ್ನೆ  ಮಧ್ಯಾಹ್ನ 3 ಜನರಿಗೆ ಸೋಂಕು ಪತ್ತೆಯಾಗಿತ್ತು.  ಮತ್ತೆ  ಸಂಜೆಯ ವೇಳೆಗೆ ಇನ್ನಿಬ್ಬರಲ್ಲಿ ಸೋಂಕು ವೈದ್ಯಕೀಯ ಪರೀಕ್ಷೆಯ ವರದಿಯಿಂದ ದೃಢಪಟ್ಟಿದ್ದು ಮೈಸೂರು ಜಿಲ್ಲೆಯಲ್ಲಿ  ಒಟ್ಟು 19 ಮಂದಿಗೆ ಸೋಂಕು ತಗಲಿದೆ.

ಮೈಸೂರಿನ ನಂಜನಗೂಡಿನಲ್ಲಿರುವ ಜ್ಯುಬಿಲಿಯಂಟ್ ಔಷಧ ಕಂಪನಿಯ 103,104 ಮತ್ತು 105 ನೇ ವ್ಯಕ್ತಿಗಳಿಗೆ ಕೊರೋನಾ ಸೋಂಕು ಇರುವುದು ಖಚಿತವಾಗಿದೆ.

ಸಂಜೆ ವೇಳೆಗೆ 52 ನೇ ಸೋಂಕಿತನ ಸಂಪರ್ಕದಲ್ಲಿದ್ದ 27 ವರ್ಷದ ಮಹಿಳೆ ಹಾಗೂ ವೃದ್ದರೊಬ್ಬರಿಗೆ ಸೋಂಕು ಪತ್ತೆಯಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: