ಮೈಸೂರು

ಮದ್ಯ ಸಿಗದ ಹಿನ್ನೆಲೆ : ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮದ್ಯವ್ಯಸನಿ

ಮೈಸೂರು,ಏ.2:-  ಮದ್ಯ ಸಿಗದ ಹಿನ್ನೆಲೆಯಲ್ಲಿ ಮದ್ಯ ವ್ಯಸನಿಯೋರ್ವ ಕತ್ತು ಕೊಯ್ದುಕೊಂಡು   ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದವನನ್ನು ಗುಂಡೂರಾವ್ ನಗರದ ಹೊಯ್ಸಳ ಬಡವಾಣೆ ನಿವಾಸಿ ಆನಂದ್(45) ಎಂದು ಹೇಳಲಾಗಿದೆ. ಈತ ಮೈಸೂರಿನಲ್ಲಿ ಟೂರಿಸ್ಟ್ ಗೈಡ್ ಕೆಲಸ ಮಾಡುತ್ತಿದ್ದ. ಮದ್ಯಕ್ಕೆ‌ ಚಟಕ್ಕೆ ದಾಸನಾಗಿದ್ದ. ಕೊರೋನಾ ಹಿನ್ನೆಲೆಯಲ್ಲಿ ಮದ್ಯದ ಅಂಗಡಿಗಳು ಬಂದ್ ಆದಾಗಿನಿಂದ ಮದ್ಯ ಸಿಗದೆ ಕಂಗಾಲಾಗಿದ್ದ. ಇಂದು ಮನೆಯಲ್ಲೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆನಂದ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ.

ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್).

Leave a Reply

comments

Related Articles

error: