
ಮೈಸೂರು
ಮೈಸೂರು ಜಿ.ಪಂ ಸಿಇಒ ಆಗಿ ಪ್ರಶಾಂತ ಕುಮಾರ್ ಮಿಶ್ರಾ ನೇಮಕ
ಮೈಸೂರು,ಏ.2:- ಮೈಸೂರು ಜಿಲ್ಲಾ ಪಂಚಾಯತ್ ಸಿಇಒ ಆಗಿ ಪ್ರಶಾಂತ ಕುಮಾರ್ ಮಿಶ್ರಾ ಅವರು ನೇಮಕವಾಗಿದ್ದಾರೆ. ಈ ಹಿಂದೆ ಎಂ.ಆರ್.ರವಿಕುಮಾರ್ ಅವರು ಸಿಇಒ ಆಗಿ ನೇಮಕವಾಗಿದ್ದರು. ಇದೀಗ ಅವರ ವರ್ಗಾವಣೆ ರದ್ದಾಗಿದೆ.
ಪ್ರಶಾಂತ ಕುಮಾರ್ ಮಿಶ್ರಾ ಅವರು ಬೆಂಗಳೂರಿನಲ್ಲಿ ಇನ್ಫಾರ್ಮೇಶನ್ ಟೆಕ್ನಾಲಜಿ ಮತ್ತು ಬಯೋಟೆಕ್ನಾಲಜಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೈಸೂರು ಜಿಲ್ಲಾ ಪಂಚಾಯತ್ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ಜ್ಯೋತಿ ಅವರು ರಜೆಯ ಮೇಲೆ ತೆರಳಿರುವುದರಿಂದ ಅವರಿಗಿನ್ನೂ ಸ್ಥಳ ನಿಗದಿಪಡಿಸಲಾಗಿಲ್ಲ ಎಂದು ತಿಳಿದು ಬಂದಿದೆ. (ಕೆ.ಎಸ್,ಎಸ್.ಎಚ್)