ಮೈಸೂರು

ಪೌರಕಾರ್ಮಿಕರಿಗೆ, ಜನಸಾಮಾನ್ಯರಿಗೆ ಉಚಿತವಾಗಿ ಆಹಾರ ಪೂರೈಕೆ

ಮೈಸೂರು,ಏ.2:- ಕೊರೋನಾ ಸೋಂಕು ಹಿನ್ನಲೆಯಲ್ಲಿ ಭಾರತ ಲಾಕ್ ಡೌನ್ ಆಗಿದ್ದು, ಕೆ ಎಂ ಕೃಷ್ಣ ನಾಯ್ಕ ಬಳಗದ ವತಿಯಿಂದ ಆಸ್ಪತ್ರೆ ಸಿಬ್ಬಂದಿಗಳಿಗೆ, ಪೌರಕಾರ್ಮಿಕರಿಗೆ, ಜನಸಾಮಾನ್ಯರಿಗೆ ಉಚಿತವಾಗಿ ಆಹಾರ ಪೂರೈಸಲಾಯಿತು.

ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಉಚಿತವಾಗಿ ಊಟ ಹಾಗೂ ಕುಡಿಯುವ ನೀರನ್ನು ಪೂರೈಸಿ ಮಾನವೀಯತೆ ಮೆರೆದಿದ್ದಾರೆ.

ಇದೇ ಸಂದರ್ಭದಲ್ಲಿ ಪುರಸಭಾ ಕಾರ್ಯಾಲಯ ಸಿಇಒ ಹಾಗೂ ವಕೀಲ ಪ್ರಸನ್ನ,ಪ್ರಶಾಂತ್ ಸೇರಿದಂತೆ ಇತರರು ಭಾಗಿಯಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: