ಮೈಸೂರು

ಕೊರೋನಾ ವೈರಸ್ ಗಾಳಿಯಲ್ಲಿ ಹರಡುವುದಿಲ್ಲ : ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸ್ಪಷ್ಟನೆ

ಮೈಸೂರು,ಏ.2:- ಕೊರೋನಾ ವೈರಸ್ ಗಾಳಿಯಲ್ಲಿ ಹರಡುವುದಿಲ್ಲ. ಆದ್ದರಿಂದ ಅಕ್ಕ,ಪಕ್ಕದ ಮನೆಯವರು ಆತಂಕ ಪಡದೇ ಕ್ವಾರೆಂಟೈನ್ ನಲ್ಲಿರುವವರನ್ನು ಅನುಮಾನದಿಂದ ನೋಡುವ ಅಗತ್ಯವಿಲ್ಲ. ಮಾನವೀಯತೆಯಿಂದ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮನವಿ ಮಾಡಿದ್ದಾರೆ.

ವಾರ್ತಾ ಮತ್ತು ಸಂಪರ್ಕ ಇಲಾಖೆಯ ಫೇಸ್ ಬುಕ್ ಪೇಜ್ ನಲ್ಲಿ  ನಿನ್ನೆ ಸಂಜೆ ನೇರ ಸಂದರ್ಶನಕ್ಕೆ ಬಂದ ಅವರು ಕ್ವಾರೆಂಟೈನ್ ನಲ್ಲಿರುವವರನ್ನು ಅನುಮಾನಿಸುವುದು ಅವಮಾನಿಸುವುದು, ಅವರ ಮನೆಯ ಬಳಿ ಗಲಾಟೆ ಮಾಡುವುದು ನಡೆಯುತ್ತಿದೆ. ಗಾಳಿಯಲ್ಲಿ ವೈರಾಣು ಹರಡುವುದಿಲ್ಲ. ಆದ್ದರಿಂದ ಜನರು ಯಾರೂ ಆತಂಕಪಡಬೇಕಾಗಿಲ್ಲ ಎಂದಿದ್ದಾರೆ.

ಸರ್ಕಾರದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತದಿಂದಲೇ ಹೋಟೆಲ್, ಲಾಡ್ಜ್, ಯಾತ್ರಿ ನಿವಾಸಗಳಲ್ಲಿ ಹೋಂ ಕ್ವಾರೆಂಟೈನ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಇರುವವರು ಎರಡು ವಾರಗಳ ಕಾಲ ಕೊಠಡಿಯಿಂದ ಹೊರಗೆ ಬರದಂತೆ ನೋಡಿಕೊಳ್ಳಲಾಗುವುದು. ಆದ್ದರಿಂದ ಯಾರಿಗೂ ತೊಂದರೆ ಇಲ್ಲ ಎಂದಿದ್ದಾರೆ.

ಮೈಸೂರಿನಿಂದ ರಾಜಸ್ಥಾನಕ್ಕೆ ಹೊರಟಿದ್ದವರನ್ನು ಮಹಾರಾಷ್ಟ್ರದ ಗಡಿಯಲ್ಲಿ ತಡೆದು ವಾಪಸ್ ಕಳುಹಿಸಲಾಗಿದೆ. ಹಿಂದೆ ಬಂದ 162ಮಂದಿಯನ್ನು ಸಿಐಟಿಬಿ ಛತ್ರದಲ್ಲಿರಿಸಿ ಊಟದ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಹೊರರಾಜ್ಯದಿಂದ ಬಂದವರಿಗೆ ಮಾನವೀಯತೆ ದೃಷ್ಟಿಯಿಂದ ಸೌಲಭ್ಯ ನೀಡಲಾಗಿದೆ ಎಂದಿದ್ದಾರೆ.

ಹಲವು ಕ್ಲಿನಿಕ್ ಗಳು ತೆರೆಯದೇ ಇರುವುದರಿಂದ ಕೆ.ಆರ್.ಆಸ್ಪತ್ರೆ ಸೇರಿದಂತೆ ದೊಡ್ಡ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗಿದೆ. ಆದ್ದರಿಂದ ಕ್ಲಿನಿಕ್ ಗಳು ತೆರೆದು ಪ್ರಾಥಮಿಕ ಚಿಕಿತ್ಸೆ ನೀಡುವಂತೆ ಕೋರಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: