ಮೈಸೂರು

ಶ್ರೀರಾಮನವಮಿ ಸರಳ ಆಚರಣೆ : ಶ್ರೀರಾಮನಿಗೂ ತಟ್ಟಿದ ಕೊರೋನಾ ಬಿಸಿ

ಮೈಸೂರು,ಏ.2:-  ಇಂದು ಶ್ರೀರಾಮನವಮಿ. ಕೊರೋನಾ ವೈರಸ್ ಸೋಂಕಿನ ಭೀತಿಯಿಲ್ಲದಿದ್ದರೆ ಇಂದು ಸಾಂಸ್ಕೃತಿಕ ನಗರಿಯಲ್ಲಿರುವ ದೇವಸ್ಥಾನಗಳು ಜನರಿಂದ ತುಂಬಿ ತುಳುಕಿರುತ್ತಿತ್ತು.  ಮೈಸೂರಿನಲ್ಲಿ ಶ್ರೀರಾಮನಿಗೂ ಕೊರೋನಾ ವೈರಸ್ ಸೋಂಕಿನ ಭೀತಿ ತಟ್ಟಿದೆ. ಭಕ್ತರು ದೇವಾಲಯಗಳಿಂದ ದೂರವೇ ಉಳಿದಿದ್ದಾರೆ.

ಕೋಸಂಬರಿ, ಪಾನಕ, ಮಜ್ಜಿಗೆ ಏನೂ ಮಾಡಲು ಈ ಕೊರೋನಾ ವೈರಸ್ ಎಂಬ ಮಹಾಮಾರಿಯ ಭೀತಿ ಬಿಡಲಿಲ್ಲ. ಭಕ್ತರು ದೇವರ ದರ್ಶನವನ್ನು ಪಡೆಯದಂತೆ ಮಾಡಿದೆ. ಹೂ,ಹಣ್ಣು ವ್ಯಾಪಾರಿಗಳಿಗೆ ಅವರ ವ್ಯಾಪಾರಕ್ಕೆ ಕೊಡಲಿಯೇಟು ನೀಡಿದೆ.

ದೇವಸ್ಥಾನದಲ್ಲಿ ರಾಮನವಮಿ ಪ್ರಯುಕ್ತ ಸರಳವಾಗಿ ಪೂಜೆಯನ್ನಷ್ಟೇ ನೆರವೇರಿಸಲಾಗಿದೆ. ಕೇವಲ ದೇವಸ್ಥಾನದ ಅರ್ಚಕರು ಮಾತ್ರ ಪೂಜೆಯಲ್ಲಿ ಭಾಗವಹಿಸಿದ್ದು ಬಿಟ್ಟರೆ ಸಾರ್ವಜನಿಕರಿಗೆ ಪೂಜೆಯಲ್ಲಿ ಭಾಗವಹಿಸಲು ಅವಕಾಶ ನೀಡದೆ ನಿರ್ಬಂಧ ವಿಧಿಸಲಾಗಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: