ಮೈಸೂರು

ಮನೆಯೊಳಗಡೆ ವ್ಯಕ್ತಿ ಸಾವು : ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ

ಕೆ.ಆರ್.ಮಿಲ್ ಕಾಲನಿಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೋರ್ವ ಕಳೆದ ಹತ್ತು ದಿನಗಳಿಂದ ಮನೆಯ ಬಾಗಿಲು ತೆರೆಯದೇ ಮನೆಯಿಂದ ದುರ್ವಾಸನೆ ಹೊರಬರುತ್ತಿದ್ದ ಕಾರಣ ಅಕ್ಕಪಕ್ಕದ ನಿವಾಸಿಗಳು ಎನ್.ಆರ್.ಠಾಣೆಯ ಪೊಲೀಸರಿಗೆ ವಿಷಯ ಮುಟ್ಟಿಸಿದ ಘಟನೆ ನಡೆದಿದೆ.

ಉದಯ್ (65) ಎಂಬವರು ಕೆ.ಆರ್.ಮಿಲ್ ಕಾಲನಿಯಲ್ಲಿ ಒಬ್ಬಂಟಿಯಾಗಿ ಹಲವು ವರ್ಷಗಳಿಂದ ವಾಸವಿದ್ದರು. ಏಟ್ರಿಯಮ್ ಹೋಟೆಲ್ ನಲ್ಲಿ ಹೌಸ್ ಕೀಪಿಂಗ್ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಇವರು 10 ದಿನಗಳಿಂದ ಮನೆಯ ಆಚೆ ಬಂದಿರಲಿಲ್ಲ. ಮನೆಯಿಂದ ದುರ್ವಾಸನೆ ಬರುತ್ತಿತ್ತು. ಇದರಿಂದ ಪೊಲೀಸರಿಗೆ ಸ್ಥಳೀಯರು ವಿಷಯ ಮುಟ್ಟಿಸಿದರು. ಪೊಲೀಸರು ಬಂದು ಬಾಗಿಲು ತೆರೆದು ನೋಡಲಾಗಿ ಉದಯ್ ಅವರ ದೇಹ ಸಂಪೂರ್ಣ  ಕೊಳೆತು ನಾರುತ್ತಿತ್ತು ಎನ್ನಲಾಗಿದೆ.

ಕೆ.ಆರ್ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹವನ್ನು ರವಾನಿಸಲಾಗಿದ್ದು, ಎನ್.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: