ಪ್ರಮುಖ ಸುದ್ದಿ

ಬೀದಿ ಬೀದಿಗೆ ಔಷಧಿ ಸಿಂಪಡಿಸಲು ರೋಬೋಟ್ ತಯಾರಿಸಿ ಬಳಸುತ್ತಿರುವ ಮಂಡ್ಯ ವಿಜ್ಞಾನಿ

ದೇಶ(ಮಂಡ್ಯ),ಏ.2:- ದೇಶಾದ್ಯಂತ ಕೊರೋನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು ಶುಚಿತ್ವ ವನ್ನು ಕಾಪಾಡಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ ,

ಬೀದಿ ಬೀದಿಗೆ ಔಷಧಿ ಸಿಂಪಡಿಸಲು ಪೌರಕಾರ್ಮಿರನ್ನು ಬಳಸಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಕೆ ಆರ್ ಪೇಟೆ ತಾಲೂಕಿನ ಕೋಮನಹಳ್ಳಿ ಗ್ರಾಮದ ವಿಜ್ಞಾನಿಯೊಬ್ಬರು ಒಂದು ರೋಬೋಟ್  ತಯಾರಿಸಿದ್ದಾರೆ. ರೋಬೋಟ್  ಮಂಜೇಗೌಡರೆಂದೇ ಪ್ರಸಿದ್ಧರಾಗಿರುವ ಅವರು  ತಾವು ತಯಾರಿಸಿರುವ ರೋಬೊಟ್ ಸೈನಿಕನ ಮೂಲಕ ಗ್ರಾಮಕ್ಕೆ ಔಷಧಿ  ಸಿಂಪಡಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: